ಬುಧವಾರ, ಏಪ್ರಿಲ್ 14, 2021
24 °C

ಫ್ರಾನ್ಸ್ ಪ್ರಶಸ್ತಿ ಸ್ವೀಕರಿಸಿದ ಐಶ್ವರ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡುಗುಲಾಬಿ ಬಣ್ಣದ ಚೂಡಿದಾರ್‌ಗೆ ಬೆಳ್ಳಿ ಕಸೂತಿಯ ಮೆರುಗು. ಹೊಂಬಣ್ಣದ ಐಶ್ವರ್ಯಾ ರೈ ಮಿಂಚುತ್ತಿದ್ದರು. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಫ್ರಾನ್ಸ್ ದೇಶದ ಪ್ರತಿಷ್ಠಿತ ಪುರಸ್ಕಾರವನ್ನು ಸ್ವೀಕರಿಸುವ ಸಂಭ್ರಮದಲ್ಲಿದ್ದರು. ನವೆಂಬರ್ ಒಂದರಂದು ಐಶ್ವರ್ಯಾರೈ ತಮ್ಮ 39ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ.`ನೈಟ್ ಆಫ್ ದಿ ಆರ್ಟರ್ ಆಫ್ ಆರ್ಟ್ ಅಂಡ್ ಲೆಟರ್~ ಪ್ರಶಸ್ತಿಯನ್ನು ಫ್ರಾನ್ಸ್‌ನ ರಾಯಭಾರಿ ಫ್ರಾನ್ಸಿಸ್ ರಿಚಿಯರ್ ಪ್ರದಾನ ಮಾಡಿದರು. ಸಮಾರಂಭಕ್ಕೆ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ಸಹ ಜೊತೆಗೂಡಿದ್ದರು.ಎರಡು ವರ್ಷಗಳ ಹಿಂದೆಯೇ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು. ಆದರೆ ಆಗ ಐಶ್ವರ್ಯಾರೈ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಪ್ರಶಸ್ತಿ ಸ್ವೀಕರಿಸಲು ಆಗಿರಲಿಲ್ಲ. ಈ ವರ್ಷ ತಮ್ಮ ಹುಟ್ಟುಹಬ್ಬದ ದಿನವೇ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಐಶ್ವರ್ಯ, ತಮ್ಮ ಕೆರಿಯರ್‌ಗೆ ಸಹಾಯ ಮಾಡಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಫ್ರಾನ್ಸ್ ದೇಶವು ಈ ಪ್ರತಿಷ್ಠಿತ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.1994ರಲ್ಲಿ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದ ಐಶ್ ನಂತರ ವಿಶ್ವ ಪರ್ಯಟನೆಯ ಮುಖಾಂತರ ಹಲವಾರು ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. 1997ರಲ್ಲಿ ಚಿತ್ರರಂಗ ಪ್ರವೇಶಿಸಿದ ಐಶ್ವರ್ಯಾರೈ ತಮಿಳು, ಬಂಗಾಳಿ, ತೆಲುಗು ಭಾಷೆಗಳೂ ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ.ಐಶ್ವರ್ಯಾ ಹೆಣ್ಣು ಮಗುವನ್ನು ಹೆತ್ತ ನಂತರ ಚಿತ್ರ ರಂಗದಿಂದ ದೂರವೇ ಉಳಿದಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.