ಶುಕ್ರವಾರ, ನವೆಂಬರ್ 15, 2019
23 °C

ಫ್ರಾನ್ಸ್ ರಾಯಭಾರ ಕಚೇರಿ ಬಳಿ ಸ್ಫೋಟ

Published:
Updated:

ಟ್ರಿಪೊಲಿ (ಎಎಫ್‌ಪಿ): ಫ್ರಾನ್ಸ್ ರಾಯಭಾರ ಕಚೇರಿ ಬಳಿ ಮಂಗಳವಾರ ಕಾರ್ ಬಾಂಬ್ ಸ್ಫೋಟಿಸಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.ಸ್ಫೋಟ ನಡೆದ ಸ್ಥಳದ ಸುತ್ತಮುತ್ತಲಿನ ಆಸ್ತಿಗೆ ಹಾನಿಯಾಗಿದೆ. ರಾಯಭಾರ ಕಚೇರಿ ಮತ್ತು ಎರಡು ಕಾರುಗಳು ಸಂಪೂರ್ಣ ನಾಶವಾಗಿವೆ.ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಈ ಸ್ಫೋಟ ನಡೆಯಿತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ದಾಳಿಯನ್ನು ಫ್ರಾನ್ಸ್ ಸರ್ಕಾರದ ಮೂಲಗಳು ದೃಢಪಡಿಸಿವೆ.

ಪ್ರತಿಕ್ರಿಯಿಸಿ (+)