ಶನಿವಾರ, ಮೇ 8, 2021
26 °C

ಫ್ರೆಂಚ್ ಓಪನ್: ಫೈನಲ್‌ಗೆ ಶರ್ಪೋವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ರಷ್ಯಾದ ಮರಿಯಾ ಶರ್ಪೋವಾ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಜಯಿಸುವ ಹಾದಿಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.ರೋಲಂಡ್ ಗ್ಯಾರೋಸ್‌ನ ಕೋರ್ಟ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಶರ್ಪೋವಾ 6-1, 2-6, 6-4ರಲ್ಲಿ ಮೂರನೇ ಶ್ರೇಯಾಂಕದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಎದುರು ಗೆಲುವು ಸಾಧಿಸಿದರು.ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಲೆನಾ ಜಾಂಕೊವಿಕ್ ಎದುರು ಜಯ ಸಾಧಿಸಿದ್ದ ಶರ್ಪೋವಾ ನಾಲ್ಕರ ಘಟ್ಟದ ಹೋರಾಟದ ಎರಡನೇ ಸೆಟ್‌ನಲ್ಲಿ ಎದುರಾದ ಹಿನ್ನಡೆಯನ್ನೂ ಮೆಟ್ಟಿ ನಿಂತು ಗೆಲುವಿನ ಕೇಕೆ ಹಾಕಿದರು.ರಷ್ಯಾದ ಆಟಗಾರ್ತಿ ನಾಲ್ಕು ಸಲ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಕಳೆದ ವರ್ಷವೂ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಶರ್ಪೋವಾ 2013ರ ಟ್ರೋಫಿಯನ್ನೂ ತಮ್ಮತ್ತ ಉಳಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.