ಫ್ರೆಂಚ್ ಓಪನ್: ಶರಪೋವಾಗೆ ಆಘಾತ ನೀಡಿದ ಸಫರೋವಾ

ಪ್ಯಾರಿಸ್(ಎಎಫ್ ಪಿ): ಹಾಲಿ ಚಾಂಪಿಯನ್ ಮರಿಯಾ ಶರಪೋವಾ ಅವರಿಗೆ ಸೋಲುಣಿಸುವ ಮೂಲಕ ಲೂಸಿಯಾ ಸಫರೋವಾ ಅವರು ಸೋಮವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ನೇರ ಸೆಟ್ ಮೂಲಕ ಜಯ ಗಳಿಸಿ ಮುನ್ನಡೆ ಸಾಧಿಸಿದ್ದಾರೆ.
ಅಮೋಘ ಆಟವಾಡಿದ ಚೆಕ್ ಗಣರಾಜ್ಯದ ಲೂಸಿಯಾ ಸಫರೋವಾ 1-3, 7-6(7/3), 6-4ರಿಂದ ಮರಿಯಾ ಶರಪೋವಾ ಅವರನ್ನು ಟೂರ್ನಿಯ ನಾಲ್ಕನೇ ಸುತ್ತಿನ ಆಟದಲ್ಲಿ ಮಣಿಸಿದರು.
ಮಳೆ ಅಡ್ಡಿಯಾಗಿತ್ತು: ಮರಿಯಾ ಶರಪೋವಾ ಮತ್ತು ಲೂಸಿಯಾ ಸಫರೋವಾ ಅವರ ನಡುವಿನ ಪ್ರೀಕ್ವಾರ್ಟರ್ಫೈನಲ್ ಪಂದ್ಯಕ್ಕೆ ಭಾನುವಾರ ಮಳೆ ಅಡ್ಡಿಯಾಗಿದ್ದರಿಂದ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.