ಬಂಕಾ ಎನ್ ಕೌಂಟರ್: ಆರು ನಕ್ಸಲಿಯರ ಹತ್ಯೆ

7

ಬಂಕಾ ಎನ್ ಕೌಂಟರ್: ಆರು ನಕ್ಸಲಿಯರ ಹತ್ಯೆ

Published:
Updated:

ಬಂಕಾ  (ಬಿಹಾರ), (ಪಿಟಿಐ): ನಕ್ಸಲರು ಹಾಗೂ ರಕ್ಷಣಾ ಸಿಬ್ಬಂದಿಗಳ ನಡುವೆ ಶನಿವಾರ ಆರು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲರು ಬಿಹಾರದ ಬಂಕಾ ಜಿಲ್ಲೆಯ ಮಜ್ ಹ್ಹೀದ್ ಗ್ರಾಮದ ಮನೆಯೊಂದರಲ್ಲಿ ಅಡಗಿರುವ ಸುಳಿವನ್ನರಿತ  ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು  ವಿಶೇಷ ಪೊಲೀಸ್ ಪಡೆಯ ಪೊಲೀಸರು ಆ ಮನೆಯನ್ನು ಸುತ್ತುವರೆದು ಶರಣಾಗುವಂತೆ ಕೋರಿದರು.

ಆದರೆ,ದಕ್ಕೆ ಪ್ರತಿಯಾಗಿ ನಕ್ಸಲಿಯರು ರಕ್ಷಣಾ ಪಡೆಯ ಸಿಬ್ಬಂದಿಯ ಮೇಲೆಯೇ ಗುಂಡಿನ ದಾಳಿ ನಡೆಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ 6 ಜನ ನಕ್ಸಲರು ಹತರಾದರು. ಅವರಿದ್ದ ಮನೆಯನ್ನು ಧ್ವಂಸ ಮಾಡಲಾಯಿತು ಎಂದು ಹಿರಿಯ ಪೋಲಿಸ್ ಅಧಿಕಾರಿ ಬಿ.ಕೆ.ದಾಸ್ ತಿಳಿಸಿದ್ದಾರೆ .

ಈ ಚಕಮಕಿಯ ಸಂದರ್ಭದಲ್ಲಿ ಹತ್ತು ನಕ್ಸಲಿಯರು ತಪ್ಪಿಸಿಕೊಂಡಿದ್ದಾರೆ. ಒಬ್ಬನನ್ನು ಬಂಧಿಸಲಾಗಿದೆಪೊಲೀಸ್ ಪಡೆಯಲ್ಲಿ ಸಾವು ನೋವುಗಳು ಸಂಭವಿಸಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry