ಬಂಗಡೆ ಮೀನು ಈಗ ಬಲು ಅಗ್ಗ

7

ಬಂಗಡೆ ಮೀನು ಈಗ ಬಲು ಅಗ್ಗ

Published:
Updated:

ಕುಮಟಾ: ಕಳೆದ ಎರಡು ದಿವಸಗಳಿಂದ ಕುಮಟಾ ತಾಲ್ಲೂಕಿನಲ್ಲಿ ಬಂಗಡೆ ಮೀನಿನ ಸುಗ್ಗಿ ಏರ್ಪಟ್ಟಿದ್ದು, ತದಡಿ, ಕುಮಟಾ ಬಂದರುಗಳಲ್ಲಿ ದೋಣಿ ಹಾಗೂ ಪರ್ಸೀನ್ ಬೋಟ್‌ಗಳು ಬಂಗಡೆ ಮೀನು ತರುತ್ತಿರುವುದು ಗಮನ ಸೆಳೆದಿದೆ.



ಮುಂಗಾರು ಕ್ಷೀಣವಾದ ಹಿನ್ನೆಲೆಯಲ್ಲಿ ಎಲ್ಲ ವಿಧದ ಮೀನುಗಾರಿಕಾ ದೋಣಿಗಳು  ಸಮುದ್ರಕ್ಕಿಳಿದು ಹೆಚ್ಚೆಚ್ಚು ಬಂಗಡೆ ಮೀನು ತರುತ್ತಿವೆ. ಬಂಗಡೆ ಮೀನಿನ ಆವಕ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅದರ ಮಾರಾಟ ದರ ಗಣನೀಯವಾಗಿ ಕಡಿಮೆ ಆಗಿದೆ.



ಬುಧವಾರ ಕುಮಟಾ ಮಾರುಕಟ್ಟೆಯಲ್ಲಿ ಬೆಳಗಿನ ಹೊತ್ತು ಹೆಚ್ಚು ಕಡಿಮೆ ಎಲ್ಲ ದೋಣಿಗಳು ತಾಜಾ ಬಂಗಡೆ ತುಂಬಿಕೊಂಡು ಬಂದಿದ್ದು, ನೂರು  ರೂ.ಗೆ 10-12 ಬಂಗಡೆಯವರೆಗೆ ಮಾರಾಟವಾಗಿದೆ. 



ಬಂಗಡೆ ಮೀನಿನ ಜೊತೆ ಅಪರೂಪಕ್ಕೆ ಕೆಲ ಪ್ರಮಾಣದಲ್ಲಿ ಬೆಳ್ಳಂಜಿ, ಇಶೋಣ ಮೀನು, ಹಲಗೆ ಮೀನು, ತೋರಿ, ಸೊರ ಮೀನು ಸಹ ಮಾರುಕಟ್ಟೆಗೆ ಬಂದಿದೆ. ಮಿರ ಮಿರನೆ ಮಿಂಚುವ ಹಸಿರು ಮಿಶ್ರಿತ ಬಂಗಡೆ ಮೀನಿನ ಮುಂದೆ ಬೇರೆ ಯಾವ ಮೀನಿಗೂ ಅಷ್ಟು ಬೇಡಿಕೆ ಉಂಟಾಗಲಿಲ್ಲ. ಬಂಗಡೆ ಮುಂದೆ ಬೆಳ್ಳಂಜಿ  ನಲವತ್ತು ರೂ. ಗೆ ನೂರರಂತೆ ಮಾರಾಟವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry