ಮಂಗಳವಾರ, ಜೂನ್ 22, 2021
22 °C

ಬಂಗಾರಪೇಟೆ: ಗಂಗಮ್ಮ ಅಧ್ಯಕ್ಷೆ, ರಮೇಶ್ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಿ.ಎಂ.ಗಂಗಮ್ಮ, ಉಪಾಧ್ಯಕ್ಷರಾಗಿ ಸಿ.­ರಮೇಶ್ ಮಂಗಳವಾರ ಅವಿರೋಧವಾಗಿ ಆಯ್ಕೆ­ಯಾದರು.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು. ಎರಡೂ ಸ್ಥಾನಗಳಿಗೆ ಒಬ್ಬೊಬ್ಬರೇ ಉಮೇದುವಾರಿಕೆ ಸಲ್ಲಿಸಿದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್‌ ಎಸ್‌.ಆರ್‌.ಉಷಾ ಆಯ್ಕೆ ಘೋಷಿಸಿದರು.ಅಧ್ಯಕ್ಷರಾಗಿ ಆಯ್ಕೆಯಾಗಿರುವ 13ನೇ ವಾರ್ಡ್‌ನ ಬಿ.ಎಂ.ಗಂಗಮ್ಮ ಅವರು ಸತತವಾಗಿ 3 ಬಾರಿ ಪಕ್ಷೇ­ತರ ಸದಸ್ಯರಾಗಿ ಆಯ್ಕೆಯಾಗಿದ್ದರು.  ನಾಲ್ಕನೇ ಬಾರಿಗೆ ಕಾಂಗ್ರೆಸ್‌ ಪಕ್ಷದ ಮೂಲಕ ಪುರಸಭೆ ಪ್ರವೇ­ಶಿ­ಸಿದ ಅವರ ಆಯ್ಕೆ ನಿರೀಕ್ಷೆಯಂತೆ ನಡೆದಿದೆ. ಉಪಾ­ಧ್ಯಕ್ಷರಾಗಿ ಆಯ್ಕೆಗೊಂಡ 3ನೇ ವಾರ್ಡ್‌ನ ಸಿ.ರಮೇ­ಶ್‌ ಎರಡನೇ ಬಾರಿಗೆ ಪುರಸಭೆ ಪ್ರವೇಶಿ­ಸಿದ್ದರು.ಪುರಸಭೆ 23 ಸದಸ್ಯರ ಬಲ ಹೊಂದಿದ್ದು, ಕಾಂಗ್ರೆಸ್‌ 15, ಜೆಡಿಎಸ್‌ 5, ಬಿಜೆಪಿ 2, ಪಕ್ಷೇತರ ಸದಸ್ಯೆ ಇದ್ದಾರೆ. ಆಯ್ಕೆ ಸಂದರ್ಭ ಜೆಡಿಎಸ್‌ ಮತ್ತು ಬಿಜೆಪಿಯ ಕೆಲ ಸದಸ್ಯರು ಗೈರುಹಾಜರಾಗಿದ್ದರು.ಕಾಂಗ್ರೆಸ್‌ ಸದಸ್ಯರಲ್ಲೇ ಗಾದಿಗಾಗಿ ತೀವ್ರ ಪೈಪೋಟಿ ನಡೆದಿತ್ತು. ಬೆಳಿಗ್ಗೆ ನಡೆದ ಮುಖಂಡರ ಸಭೆಯಲ್ಲಿ ಅವಿರೋಧ ಆಯ್ಕೆ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.ಒಕ್ಕಲಿಗರಿಗೆ ಪ್ರಾತಿನಿಧ್ಯ: ಪುರಸಭೆ ಆಡಳಿತ ಇತಿಹಾಸ­ದಲ್ಲಿಯೇ ಪ್ರಥಮ ಬಾರಿಗೆ ಒಕ್ಕಲಿಗ ಜನಾಂಗಕ್ಕೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಬೆಂಬಲಿಗರು ಪಟಾಕಿ ಸಿಡಿಸಿ ಖುಷಿ ಪಟ್ಟರು.ಅಧ್ಯಕ್ಷರ ಆಯ್ಕೆ ನಂತರ ಮಾತನಾಡಿದ ಕೇಂದ್ರ ಸಚಿವ ಮುನಿಯಪ್ಪ, ಶಾಸಕ ಎಸ್‌.ಎನ್‌.ನಾರಾಯಣ­ಸ್ವಾಮಿ, ಪಕ್ಷಭೇದ ಮರೆತು ಎಲ್ಲ ವಾರ್ಡ್‌ಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕು. ಅಭಿವೃದ್ಧಿ ಕೆಲಸಕ್ಕೆ ಆಧ್ಯತೆ ನೀಡಬೇಕು ಎಂದು ಹೇಳಿದರು.ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್‌, ಮುಖಂಡರಾದ ಮುಳಬಾಗಲಿನ ರಾಮ­ಪ್ರಸಾದ್‌,  ವೆಂಕಟಮುನಿಯಪ್ಪ ಮತ್ತು ಪುರಸಭೆ ಸದಸ್ಯರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.