ಗುರುವಾರ , ಅಕ್ಟೋಬರ್ 24, 2019
21 °C

ಬಂಗಾರಪ್ಪಗೆ ಈಡಿಗ ಸಂಘದ ಶ್ರದ್ಧಾಂಜಲಿ

Published:
Updated:

ಚಾಮರಾಜನಗರ: ನಗರದ ಚಾಮ ರಾಜೇಶ್ವರ ಉದ್ಯಾನದ ಮುಂಭಾಗ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೆ ಆರ್ಯ ಈಡಿಗರ ಯುವಕ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಂಘದ ಕಾರ್ಯದರ್ಶಿ ಅಮಚ ವಾಡಿ ನಾರಾಯಣ್ ಮಾತನಾಡಿ, `ಬಂಗಾರಪ್ಪ ದೀನದಲಿತರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದರು. ಬಡವರಿಗೆ ಆಶ್ರಯ ಮನೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ನೀಡಿದ್ದು ಅವರ ಹೆಗ್ಗಳಿಕೆಯಾಗಿದೆ. ಯುವಕರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಬಂಗಾರಪ್ಪ ಅವರು ರೈತರು ಮತ್ತು ಬಡಜನರ ಅಭಿವೃದ್ಧಿ ದುಡಿದ ಧೀಮಂತ ನಾಯಕ ಎಂದು ಬಣ್ಣಿಸಿದರು.ಕಾರ್ಯಕ್ರಮದ ಬಳಿಕ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಒಳರೋಗಿ ಗಳಿಗೆ ಹಣ್ಣು ವಿತರಿಸಲಾಯಿತು. ರಾಘವೇಂದ್ರ ಚಿತ್ರಮಂದಿರದ ಮಾಲೀಕ ಮೋಹನ್‌ಕುಮಾರ್, ಸಂಘದ ಉಪಾಧ್ಯಕ್ಷ ಸಂತೋಷ್, ಖಜಾಂಚಿ ಸಿ.ಪಿ. ಜಗದೀಶ್, ಚಂದಕವಾಡಿ ಗ್ರಾ.ಪಂ. ಸದಸ್ಯ ರಮೇಶ್, ಕಾಗಲವಾಡಿ ಸಿದ್ದರಾಜು, ಅಮಚವಾಡಿ ಗ್ರಾಮದ ಪಿಎಸಿಸಿ ಬ್ಯಾಂಕ್ ನಿರ್ದೇಶಕ ಡಿ. ನಾರಾಯಣಸ್ವಾಮಿ, ವೆಂಕಟೇಶ್, ನವೀನ್, ನಟರಾಜು, ಶಿವಕುಮಾರ್, ಶ್ರೀನಿವಾಸ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)