ಬುಧವಾರ, ಜನವರಿ 22, 2020
22 °C

ಬಂಗಾರಪ್ಪ ಬಡವರ ಪಾಲಿನ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: `ಅಪರೂಪದ ರಾಜಕೀಯ ಮುತ್ಸದ್ದಿ ಎಸ್. ಬಂಗಾರಪ್ಪ ಅವರ ಜೀವನದ ಆದರ್ಶಗಳನ್ನು ಇಂದಿನ ರಾಜಕಾರಿಣಿಗಳು ಅಳವಡಿಸಿಕೊಂಡು ಬಡವರ ಕಲ್ಯಾಣಕ್ಕೆ ಮುಂದಾಗಬೇಕು. ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ~ ಎಂದು ಸೋಲೂರಿನ ನಾರಾಯಣಗುರು ಮಠಾಧೀಶರಾದ ಆರ್ಯರೇಣುಕಾನಂದ ಸ್ವಾಮಿಜಿ ಸಲಹೆ ನೀಡಿದರು. ಅವರು ಪಟ್ಟಣದಲ್ಲಿ ಅಹಿಂದ ವೇದಿಕೆ ವತಿಯಿಂದ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಸಾನಿಧ್ಯವಹಿಸಿ ಮಾತನಾಡಿದರು. ನಂತರ ಅವರು, ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು.ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕಾವೇರಿ ನೀರು ಹಂಚಿಕೆ ಹೋರಾಟದಲ್ಲಿ ದಿಟ್ಟತನ ತೋರಿದ ಧೀರ ರಾಜಕಾರಣಿ ಎಸ್. ಬಂಗಾರಪ್ಪ ಎಂದರು. ಮಾಗಡಿ- ಬೆಂಗಳೂರು ರಸ್ತೆಯನ್ನು ವಿಸ್ತರಿಸಲು ಯೋಜನೆ ನೀಡಿದ್ದರು ಎಂದರು. ಶಾಸಕ ಎಚ್.ಸಿ. ಬಾಲಕೃಷ್ಣ ಪುರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿ, ಎಸ್. ಬಂಗಾರಪ್ಪ ಅವರು ರೈತರ ಪರವಾಗಿ ಜಾರಿಗೆ ತಂದಿದ್ದ ವಿದ್ಯುತ್ ಯೋಜನೆಗಳನ್ನು ನೆನಪಿಸಿಕೊಂಡರು.ಕೆ.ಪಿ.ಸಿ.ಸಿ. ಸದಸ್ಯ ಎ. ಮಂಜು, ಎಸ್. ಬಂಗಾರಪ್ಪ ಅವರ ಆದರ್ಶಗಳನ್ನು ಕುರಿತು ಮಾತನಾಡಿದರು. ತಾ.ಪಂ. ಮಾಜಿ ಸದಸ್ಯ ಸಿ.ಜಯರಾಮು ಪ್ರಾಸ್ತಾವಿಕ ಭಾಷಣ ಮಾಡಿದರು. ಪುರಸಭೆಯ ಮಾಜಿ ಅಧ್ಯಕ್ಷರಾದ ಪಿ.ವಿ.ಸೀತಾರಾಮು, ರುಕ್ಮಿಣಿರಂಗನಾಥ್, ಅಧ್ಯಕ್ಷ ನರಸೇಗೌಡ, ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಕಾಂಗ್ರೆಸ್ ಮುಖಂಡ ಬಿ.ವಿ.ಜಯರಾಮು, ಸಿ.ಪಿ.ಐ.ಎಚ್.ರವಿ, ಡಿ.ಸಿ. ಶಿವಣ್ಣ, ಎಸ್.ಬಂಗಾರಪ್ಪ ಅವರ ಆಡಳಿತ ವೈಖರಿ  ಕುರಿತು ಮಾತನಾಡಿದರು.ಜೆ.ಡಿ.ಎಸ್.ಮುಖಂಡ ನಾಗೇಶ್, ಬಿ.ಜೆ.ಪಿ.ಮುಖಂಡರಾದ ಕಲ್ಕೆರೆಶಿವಣ್ಣ, ವಿಶ್ವ, ಅಶ್ವಥ್, ಪುರಸಭೆಯ ಹಿರಿಯ ಸದಸ್ಯರಾದ ಎನ್.ಗಂಗಯ್ಯ, ಎಂ.ಎಚ್.ರಂಗನಾಥ್, ರೂಪೇಶ್,ಜಯಣ್ಣ, ಕಲ್ಯಾಗೇಟ್ ನರಸಿಂಹಯ್ಯ,  ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪಿ.ವಿ.ಶಾಂತರಾಜ್, ತಾ.ಪಂ. ಮಾಜಿ ಸದಸ್ಯ ಜುಟ್ಟನಹಳ್ಳಿ ಜಯರಾಮು, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್, ಬಸವರಾಜು ಈಡಿಗ, ಪುಟ್ಟಸ್ವಾಮಿ, ಗಣೇಶ್, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಎಂ.ಮುರಳಿ ಕೃಷ್ಣ, ಪಾಳೇಗಾರ ಲಕ್ಷ್ಮಣ್ ನಾಯಕ, ಚಿಗಳೂರು ಗಂಗಾಧರ್, ದೊಡ್ಡಿಲಕ್ಷ್ಮಣ್ ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)