ಬಂಗಾರು ಲಕ್ಷ್ಮಣ್‌ಗೆ ಜಾಮೀನು

7

ಬಂಗಾರು ಲಕ್ಷ್ಮಣ್‌ಗೆ ಜಾಮೀನು

Published:
Updated:

ನವದೆಹಲಿ (ಪಿಟಿಐ): ರಕ್ಷಣಾ ಸಾಮಗ್ರಿ ಖರೀದಿ ವ್ಯವಹಾರ ಕುದುರಿಸಲು ಲಂಚ ಪಡೆದ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಜೆಪಿಯ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.ಲಕ್ಷ್ಮಣ್ ಅವರು ಮಾರುವೇಷದ ಪತ್ರಕರ್ತರಿಂದ 1 ಲಕ್ಷ ರೂಪಾಯಿ ಲಂಚ ಪಡೆದಿದ್ದನ್ನು `ತೆಹಲ್ಕಾ~ ನಡೆಸಿದ ಕುಟುಕು ಕಾರ್ಯಾಚರಣೆ ಬಯಲಿಗೆ ಎಳೆದಿತ್ತು. ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು.

 

ವೈಯಕ್ತಿಕ ಜಾಮೀನು ಮತ್ತು 50 ಸಾವಿರ ರೂಪಾಯಿಗಳ ಭದ್ರತಾ ಠೇವಣಿ ಪಡೆದು ಲಕ್ಷ್ಮಣ್ ಅವರನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿ ಎ. ಕೆ. ಪಾಠಕ್ ಅವರು ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry