ಬಂಗಾರ ಧಾರಣೆ ರೂ.500 ಅಗ್ಗ

7
ಬೆಳ್ಳಿ ಬೆಲೆ ಕೆ.ಜಿಗೆ ರೂ.1220 ಇಳಿಕೆ

ಬಂಗಾರ ಧಾರಣೆ ರೂ.500 ಅಗ್ಗ

Published:
Updated:

ಮುಂಬೈ/ನವದೆಹಲಿ (ಪಿಟಿಐ): ವಿವಿಧ ದೇಶಗಳ ಚಿನಿವಾರ ಪೇಟೆಗಳಲ್ಲಿ ಚಿನ್ನದ ಧಾರಣೆ ಇಳಿಮುಖವಾಗಿರುವ ಹಿನ್ನೆಲೆ ಯಲ್ಲಿ ಮುಂಬೈ ಮತ್ತು ದೆಹಲಿಯ ಲ್ಲಿಯೂ ಬಂಗಾರ ಸೋಮವಾರ ತುಸು ಅಗ್ಗವಾಯಿತು. ಚಿನ್ನ ಸಂಗ್ರಹಕಾರರು ತಮ್ಮಲ್ಲಿದ್ದ ಸರಕನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಮುಗಿಬಿದ್ದಿದ್ದು ಸಹ ಬಂಗಾರದ ಧಾರಣೆ ಗರಿಷ್ಠ ರೂ.500 ರವರೆಗೂ ಇಳಿಯುವಂತೆ ಮಾಡಿತು.೧೦ ಗ್ರಾಂ ಚಿನ್ನ ಮುಂಬೈನಲ್ಲಿ ರೂ.500ರಷ್ಟು ತಗ್ಗಿದ್ದರೆ, ನವದೆಹಲಿ ಯಲ್ಲಿ ರೂ.200ರಷ್ಟು ಕಡಿಮೆ ಆಯಿತು. ಸಿದ್ಧ ಬೆಳ್ಳಿ ಬೆಲೆ ಮಾತ್ರ ಮುಂಬೈನಲ್ಲಿ ರೂ.1,000ದಷ್ಟು ಕಡಿಮೆಯಾದರೆ, ನವದೆಹಲಿಯಲ್ಲಿ ರೂ.1220ರವರೆಗೂ ಕೆಳಕ್ಕಿಳಿಯಿತು.ಮುಂಬೈ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ಸೋಮವಾರ ರೂ.29,650ರಲ್ಲಿ ಮತ್ತು ಅಪರಂಜಿ ಚಿನ್ನ ರೂ.29,800ರಲ್ಲಿ ಮಾರಾಟವಾಯಿತು. ಬೆಳ್ಳಿ ಕೆ.ಜಿ.ಗೆ ರೂ.50,200ಕ್ಕೆ ಬಂದಿತು.ನವದೆಹಲಿ ಧಾರಣೆ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬಂಗಾರದ ಧಾರಣೆ ಸತತ ಐದನೇ ದಿನವೂ ಬೆಳೆ ಕಳೆದುಕೊಂಡು ಕೆಳಕ್ಕಿಳಿಯಿತು. ಸ್ಟ್ಯಾಂಡರ್ಡ್ ಚಿನ್ನ ರೂ.29,900ಕ್ಕೂ, ಅಪರಂಜಿ ಚಿನ್ನ ರೂ.30,10೦ಕ್ಕೂ ತಗ್ಗಿತು. ಕೆ.ಜಿ. ಬೆಳ್ಳಿ ಯಂತೂ ರೂ.50,000ದ ಗಡಿಯಿಂದ ಕೆಳಕ್ಕಿಳಿದು ರೂ.49,530ಕ್ಕೆ ಮಾರಾಟ ವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry