ಬಂಗಾರ ಪಡೆದ ಪತ್ತಾರರು ಪರಾರಿ

7

ಬಂಗಾರ ಪಡೆದ ಪತ್ತಾರರು ಪರಾರಿ

Published:
Updated:

ವಿಜಾಪುರ: ಅಂಗಡಿ ಬಾಡಿಗೆ ಹಿಡಿದ ಪತ್ತಾರರು ಆಭರಣ ಮಾಡಿಕೊಡುತ್ತೇವೆ ಎಂದು ಮಾಲಿಕರಿಂದಲೇ ಬಂಗಾರ ಪಡೆದು ವಂಚಿಸಿ ಪರಾರಿಯಾದ ಘಟನೆ ಜಿಲ್ಲೆಯ ಮಟ್ಟಿಹಾಳ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.ಗ್ರಾಮದ ಲಕ್ಷಿಂಬಾಯಿ ಎಂಬ ಮಹಿಳೆಯು ಸುಮಾರು 3 ವರೆ ತೊಲ ಬಂಗಾರ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾಳೆ.ಶಿಗ್ಗಾಂವಿ ತಾಲ್ಲೂಕಿನ ಹುಲಗೂರ ಗ್ರಾಮದ ಮಂಜುನಾಥ ಬಾಬಣ್ಣ ವೇರಣೆಕರ ಮತ್ತು ಇನ್ನು ನಾಲ್ಕು ಜನರು ಸೇರಿಕೊಂಡು ಮಟ್ಟಿಹಾಳ ಗ್ರಾಮದ ಲಕ್ಷಿಂಬಾಯಿ ಎಂಬುವರ ಅಂಗಡಿ ಬಾಡಿಗೆ ಪಡೆದರು. ಪತ್ತಾರರು ಆಭರಣ ಮಾಡಿಕೊಡುತ್ತೇವೆ ಎಂದು ಮಹಿಳೆಯನ್ನು ನಂಬಿಸಿ ಈ ಬಂಗಾರ ಪಡೆದು ಮರಳಿ ಕೊಡದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry