ಬಂಗಾರ ರೂ 725 ತುಟ್ಟಿ

7

ಬಂಗಾರ ರೂ 725 ತುಟ್ಟಿ

Published:
Updated:

ನವದೆಹಲಿ(ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಶನಿ ವಾರ ಚಿನ್ನದ ಧಾರಣೆ ಕನಿಷ್ಠ ರೂ180ರಿಂದ ಗರಿಷ್ಠ ರೂ725ರವರೆಗೂ ಏರಿಕೆ ಕಂಡಿದೆ.ಕಳೆದ ಮೂರು ದಿನಗಳಿಂದ ಇಳಿ ಮುಖವಾಗಿದ್ದ ಚಿನ್ನ ನವದೆಹಲಿಯಲ್ಲಿ 10 ಗ್ರಾಂಗೆ ರೂ725ರಷ್ಟು ಏರಿಕೆ ದಾಖಲಿ ಸಿದರೆ, ಮುಂಬೈನಲ್ಲಿ ರೂ180ರಿಂದ ರೂ190ರಷ್ಟು ಬೆಲೆ ಹೆಚ್ಚಿಸಿಕೊಂಡಿತು. ಸಿದ್ಧ ಬೆಳ್ಳಿಯೂ ಮುಂಬೈನಲ್ಲಿ ರೂ50 ಹಾಗೂ ದೆಹಲಿಯಲ್ಲಿ  ರೂ1485ರಷ್ಟು ಏರಿಕೆ ಕಂಡಿತು. ಮುಂಬೈನಲ್ಲಿ ಕೆ.ಜಿ.ಗೆ ರೂ55,000ರ ಗಡಿ ದಾಟಿತು.10 ಗ್ರಾಂ ಅಪರಂಜಿ ಚಿನ್ನ ರೂ31,725ರಲ್ಲೂ, ಸ್ಟ್ಯಾಂಡರ್ಡ್ ಚಿನ್ನ ರೂ31,525ರಲ್ಲೂ ವಹಿವಾಟು ನಡೆಸಿತು. ಸಿದ್ಧ ಬೆಳ್ಳಿ ಕೆ.ಜಿ.ಗೆ ರೂ54,300ರಲ್ಲಿ ವಹಿವಾಟು ನಡೆಸಿತು. 10 ಗ್ರಾಂ ಅಪರಂಜಿ ಚಿನ್ನ ರೂ31,110ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ30,970ಕ್ಕೂ ಬೆಲೆ ಹೆಚ್ಚಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry