ಮಂಗಳವಾರ, ನವೆಂಬರ್ 12, 2019
28 °C

ಬಂಗಾಳಿ ಕಲಿಯುತ್ತಿರುವ ಮುಗ್ಧಾ

Published:
Updated:

ರಿತುಪರ್ಣ ಘೋಷ್ ಹಾಗೂ ಅಪರ್ಣಾ ಸೇನ್ ಅವರ ಚಿತ್ರದಲ್ಲಿ ನಟಿಸಲು ತಾನು ಯಾವ ಬೆಲೆ ತೆತ್ತಾದರೂ ಬಂಗಾಳಿ ಭಾಷೆ ಕಲಿಯುವುದಾಗಿ ನಟಿ ಮುಗ್ಧಾ ಘೋಡ್ಸೆ ತಿಳಿಸಿದ್ದಾರೆ.`ರಿತುಪರ್ಣ ಘೋಷ್ ಹಾಗೂ ಅಪರ್ಣಾ ಸೇನ್ ಅವರ ಚಿತ್ರದಲ್ಲಿ ನಟಿಸಬೇಕೆನ್ನುವುದು ನನ್ನ ಬಹುದಿನಗಳ ಬಯಕೆ. ಆದರೆ ಬಂಗಾಳಿ ಭಾಷೆ ಬಾರದಿರುವುದೇ ಬಹು ದೊಡ್ಡ ತೊಡಕು. ಹೀಗಾಗಿ ಅದನ್ನು ಕಲಿಯಲು ಯಾವುದೇ ರೀತಿಯ ಕಠಿಣ ಅಭ್ಯಾಸಕ್ಕೆ ನನ್ನನ್ನು ಒಡ್ಡಿಕೊಳ್ಳಲು ಹಿಂಜರಿಯುವುದಿಲ್ಲ' ಎಂದಿರುವ ಮುಗ್ಧಾ, ಅಪರ್ಣಾ ಸೇನ್ ಅವರ `ಗ್ಯೋನಾರ್ ಬಾಕ್ಶೊ' ಸೂಪರ್ ಹಿಟ್ ಚಿತ್ರವನ್ನು ಸಬ್‌ಟೈಟಲ್‌ಗಳ  (ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಸಂಭಾಷಣೆಯ ಬರಹ ಇರುವ ಪ್ರಿಂಟ್) ಮೂಲಕ ನೋಡಬೇಕೆಂದಿದ್ದಾರಂತೆ.“ರಿತುಪರ್ಣ ಘೋಷ್ ಅವರ `ಚೊಖೆರ್ ಬಾಲಿ' ಚಿತ್ರದಲ್ಲಿ ಐಶ್ವರ್ಯ ರೈ ನಟಿಸಿದ್ದಾರೆ. ರಿತುಪರ್ಣ ಅವರ ಚಿತ್ರ ಎಂದು ಮಾತ್ರವಲ್ಲ, ಬಂಗಾಳಿ ಚಿತ್ರದಲ್ಲಿ ಐಶ್ವರ್ಯ ರೈ ಅವರ ಅಭಿನಯ ನೋಡಲೆಂದೇ ಈ ಚಿತ್ರವನ್ನು ನೋಡಿದೆ. ನಿಜಕ್ಕೂ ಅದೊಂದು ಅದ್ಭುತ ಚಿತ್ರ. ಐತಿಹಾಸಿಕ ಪಾತ್ರಗಳ ಸೃಷ್ಟಿಯಂತೂ ಮನಮೋಹಕವಾಗಿದೆ' ಎಂದು ಮುಗ್ಧಾ ಮುಕ್ತಕಂಠದಿಂದ ಹೊಗಳಿದ್ದಾರೆ.

 

ಪ್ರತಿಕ್ರಿಯಿಸಿ (+)