ಸೋಮವಾರ, ಜೂನ್ 21, 2021
27 °C

ಬಂಗಾಳ: ಕಾಂಗ್ರೆಸ್‌ ಹಿರಿಯರ ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಚುನಾವಣಾ ಟಿಕೆಟ್‌ಗಾಗಿ ಸ್ಪರ್ಧಾಕಾಂಕ್ಷಿಗಳು ರಾಜ­ಕೀಯ ಪಕ್ಷಗಳ ಕಚೇರಿ ಮುಂದೆ ಸಾಲು­ಗಟ್ಟಿ ನಿಂತಿದ್ದರೆ, ಪಶ್ಚಿಮ ಬಂಗಾಳದ ಕಾಂಗ್ರೆಸ್‌ನ ಹಿರಿಯ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷ­ರಾದ ಮಾನಸ್‌ ಭುನಿಯಾ ಮತ್ತು ಪ್ರದೀಪ್‌ ಭಟ್ಟಾಚಾರ್ಯ, ಹಿರಿಯ ಮುಖಂಡ­ರಾದ ಅಬ್ದುಲ್‌ ಮನ್ನಾನ್‌ ಹಾಗೂ ಶಂಕರ್‌ ಸಿಂಗ್‌ ಅವರು ಚುನಾವಣೆ­ಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ.ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬಲು ಚುನಾವಣೆಯಲ್ಲಿ ಹಿರಿಯ ಮುಖಂಡರು ಕಣಕ್ಕಿಳಿಯಬೇಕು  ಎಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಹೇಳಿದ್ದರೂ, ಈ ನಾಯಕರು ಸ್ಪರ್ಧೆಗೆ ಹಿಂಜರಿಯುತ್ತಿ­ದ್ದಾರೆ.‘ಅದೊಂದು ಸಾಮಾನ್ಯ ಚರ್ಚೆ­ಯಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸು­ವಂತೆ ನಿರ್ದಿಷ್ಟವಾಗಿ ನನಗೆ ಸೂಚಿಸಿಲ್ಲ’ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.ಚುನಾವಣಾ ಅಖಾಡಕ್ಕೆ ಇಳಿಯು­ವಂತೆ ಇತರ ನಾಯಕರಿಗೆ ಸೂಚಿಸಿ­ದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಟ್ಟಾಚಾರ್ಯ, ‘ಹೌದು. ಮನ್ನಾನ್‌ ಮತ್ತು ಮಾನಸ್ ಅವರಿಗೆ ಸೂಚಿಸಲಾಗಿತ್ತು. ತಮ್ಮ ಕಷ್ಟಗಳನ್ನು ಪಕ್ಷದ ನಾಯಕತ್ವಕ್ಕೆ ಅವರು ತಿಳಿಸಿದ್ದಾರೆ. ಆದರೆ, ಒಂದು ವೇಳೆ ಸ್ಪರ್ಧಿಸಲೇ ಬೇಕು ಎಂದು ಸೂಚಿಸಿದರೆ, ಕಣಕ್ಕಿಳಿಯಲು ಸಿದ್ಧವಿರುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.ಆಡಳಿತಾರೂಢ ಟಿಎಂಸಿ ರಾಜ್ಯದಲ್ಲಿ ಪ್ರಬಲವಾಗಿರು­ವುದ­ರಿಂದ ಹಾಗೂ ಕಾಂಗ್ರೆಸ್‌ ಸೋಲುವ ಮುನ್ಸೂಚನೆಯನ್ನು ವಿವಿಧ ಸಮೀಕ್ಷೆಗಳು ನೀಡಿರುವ ಹಿನ್ನೆಲೆಯಲ್ಲಿ ಸೋಲುವ ಭಯದಿಂದಾಗಿ ಕಾಂಗ್ರೆಸ್‌ ನಾಯಕರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.