ಸೋಮವಾರ, ಮೇ 23, 2022
30 °C

ಬಂಜಾರಾ ಜನಾಂಗಕ್ಕೆ ಶಿಕ್ಷಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಶತಮಾನಗಳಿಂದ ಕಾಡುಗಳಲ್ಲೇ ವಾಸವಿದ್ದ ಬಂಜಾರಾ ಸಮಾಜವು ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಅತಿ ಅವಶ್ಯಕವಾಗಿದೆ ಎಂದು ಜಿಪಂ ಉಪಾಧ್ಯಕ್ಷ ತಾನಾಜಿ ರಾಠೋಡ ಅಭಿಪ್ರಾಯಪಟ್ಟರು.ಭಾಲ್ಕಿಯಲ್ಲಿ ಬಂಜಾರಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಈಚೆಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಲಂಬಾಣಿ ಜನರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು. ಉತ್ತಮ ಸಂಸ್ಕಾರ ನೀಡಬೇಕು ಎಂದು ಮನವಿ ಮಾಡಿದರು.ಕಾರಂಜಾ ಯೋಜನೆ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಈಶ್ವರ ನಾಯಕ ಮಾತನಾಡಿ, ಸಂಘಟನೆಯಲ್ಲಿ ಬಹು ದೊಡ್ಡ ಶಕ್ತಿ ಅಡಗಿದೆ ಎಂದು ಹೇಳಿದರು. ಅಧಿಕಾರ ಇದ್ದಾಗ ಗುಣಮಟ್ಟದ ಸೇವೆ ಮಾಡುವ ಮೂಲಕ ಜನಮನ್ನಣೆ ಗಳಿಸಬೇಕು ಎಂದು ನುಡಿದರು.ಡಿಎಸ್‌ಪಿ ಆರ್.ಎಚ್. ನಾಯಕ್ ಉದ್ಘಾಟಿಸಿದರು. ಎಂ.ಪಿ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ತಾನಾಜಿ ರಾಠೋಡ ಹಾಗೂ ಬೀದರ್ ತಾಪಂ ಅಧ್ಯಕ್ಷ ಗಣಪತಿ ರಾಠೋಡ ಅವರನ್ನು ಸತ್ಕರಿಸಲಾಯಿತು. ಗುರುನಾಥ ಪವಾರ, ರಾಜಶೇಖರ ಪವಾರ, ಶಿವದತ್ತ ರಾಠೋಡ, ಹಣಮಂತ ರಾಠೋಡ ಇದ್ದರು. ಬಿ.ಎಲ್. ರಾಠೋಡ ಸ್ವಾಗತಿಸಿದರು. ರೇಕುನಾಯಕ್ ನಿರ್ವಹಿಸಿದರು. ಗುರುನಾಥ ವಂದಿಸಿದರು.ಪ್ರಾಯೋಗಿಕ ಸಮಾರೋಪ:

ಭಾಲ್ಕಿ ತಾಲ್ಲೂಕಿನ ತಳವಾಡ(ಕೆ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರಡ್ಯಾಳದ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಡಿ.ಎಡ್ ಕಾಲೇಜಿನಿಂದ ಪ್ರಾಯೋಗಿಕ ಪಾಠಗಳ ಸಮಾರೋಪ ಸಮಾರಂಭದಲ್ಲಿ ಜರುಗಿತು.ಹಿರಿಯ ಸಾಹಿತಿ ಡಾ. ಜಿ.ಬಿ. ವಿಸಾಜಿ, ಪ್ರಾಚಾರ್ಯ ನಿಜಲಿಂಗಯ್ಯ ಸ್ವಾಮಿ, ಬಿ.ಎಸ್. ಥಮಕೆ, ಮುಖ್ಯಗುರು ವಿಶ್ವಾವತಿ, ರಮೇಶ ಕುಟಮಲಗೆ, ರಾಚಮ್ಮ ಪಾಟೀಲ, ದಶರಥ ಔರಾದೆ, ಮಹಾದೇವಿ, ಕವಿತಾ, ಶೃತಿ, ಬಸವರಾಜೇಶ್ವರಿ ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.