ಬಂಜಾರ ಸಮಾಜದ ಸಂಘಟನೆ ಹೆಚ್ಚಬೇಕು

7

ಬಂಜಾರ ಸಮಾಜದ ಸಂಘಟನೆ ಹೆಚ್ಚಬೇಕು

Published:
Updated:

ಭದ್ರಾವತಿ: `ಹಿಂದುಳಿದ ಬಂಜಾರ ಸಮಾಜ ಬಂಧುಗಳು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗುವ ಅಗತ್ಯವಿದೆ~ ಎಂದು ಸಮಾಜದ ಯುವ ಮುಖಂಡ ಬಿಳಿಕಿ ದೂದಾನಾಯ್ಕ ಹೇಳಿದರು.ಇಲ್ಲಿನ ಸಿರಿಯೂರು ತಾಂಡಾದಲ್ಲಿ ಈಚೆಗೆ ಸಂತ ಸೇವಾಲಾಲ್ ಬಂಜಾರ ಯುವಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇಂದು ಸಮಾಜದ ಸಂಘಟನೆ ಅಗತ್ಯ ಹೆಚ್ಚಿದೆ. ಇಲ್ಲವಾದಲ್ಲಿ ಸಮುದಾಯ ಸ್ಥಿತಿ ಅಧೋಗತಿ ಹಾದಿ ಹಿಡಿಯಲಿದೆ. ಸಂಘಟನೆ ಇದ್ದಾಗ ಮಾತ್ರ ಸರ್ಕಾರ ನಮ್ಮ ಕಡೆ ದೃಷ್ಟಿ ಹರಿಸುತ್ತದೆ ಎಂದರು.ಸಭೆಯಲ್ಲಿ ಯುವಕ ಸಂಘದ ಜಿಲ್ಲಾ ಉಪಾಧ್ಯಕ್ಷ ಕಾಳಿದಾಸ್ ನಾಯಕ, ಗಂಗಾನಾಯ್ಕ, ಆರ್. ಲಚ್ಮಾನಾಯ್ಕ, ಹೇಮಂತ್‌ನಾಯ್ಕ, ಗಿರೀಶ್ ನಾಯ್ಕ  ಮಾತನಾಡಿದರು.ಪ್ರದೀಪ್ ಪ್ರಾರ್ಥಿಸಿದರು, ಅರುಣ್‌ಕುಮಾರ್ ಸ್ವಾಗತಿಸಿದರು, ಸುರೇಶ್‌ನಾಯ್ಕ ವಂದಿಸಿದರು. ಕಳವು

ಭದ್ರಾವತಿ:  ತಾಲ್ಲೂಕಿನ ಸಿದ್ದಾಪುರ ತಾಂಡಾದ ಅಂಗಡಿಯ ಬೀಗ ಮುರಿದು ಸುಮಾರು ರೂ 15 ಸಾವಿರ ನಗದು ಹಾಗೂ ರೂ 3 ಸಾವಿರ ಮೌಲ್ಯದಷ್ಟು ವಿವಿಧ ಕಂಪೆನಿಗಳ ಕರೆನ್ಸಿ ಕಳವು ಮಾಡಿರುವ ಘಟನೆ ನಡೆದಿದೆ.

ಅಂಗಡಿ ಮಾಲೀಕರು ಬೀಗ ಹಾಕಿಕೊಂಡು ಸಿದ್ದಾಪುರ ಕಡೆಗೆ ಹೋಗಿ ಬರುವಷ್ಟರಲ್ಲಿ ಕಳವು ಘಟನೆ ನಡೆದಿದೆ.

ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಅಕ್ರಮ ಮರ ಸಾಗಣೆ ಯತ್ನ

ಭದ್ರಾವತಿ:
ಹಳ್ಳಿಕೆರೆ ಗ್ರಾಮದ ಶ್ರೀನಿವಾಸರಾವ್ ಅವರ ಜಮೀನಿನಲ್ಲಿ ಅಕ್ರಮವಾಗಿ ಕಡಿದು ಹಾಕಲಾಗಿದ್ದ ಮರದ ಮುಂದೆ ಒಬ್ಬ ವ್ಯಕ್ತಿ ನಿಂತಿದ್ದು ಪೊಲೀಸರನ್ನು ಕಂಡು ಓಡಿ ಹೋಗಿರುವ ಘಟನೆ ನಡೆದಿದೆ.ಮರದ ತುಂಡುಗಳ ಕುರಿತಂತೆ ವಿಚಾರ ಮಾಡಿದಾಗ ಅದಕ್ಕೆ ಯಾವುದೇ ಪರವಾನಗಿ ಇಲ್ಲದ್ದನ್ನು ಮನಗಂಡ ಹೊಸಮನೆ ಪೊಲೀಸರು ಮಾಹಿತಿ ಕಲೆ ಹಾಕಿದ ಆಧಾರದ ಮೇಲೆ ಮಂಜುನಾಥ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಎರಡು ಕಾಡು ಜಾತಿಯ ಮರ ಸೇರಿದಂತೆ ರೂ 20 ಸಾವಿರ ಮೌಲ್ಯದ ಸಾಗವಾನಿ ಮರವನ್ನು ವಶಕ್ಕೆ ಪಡೆದಿರುವ ಪೊಲೀಸರು ಘಟನೆ ಕುರಿತಂತೆ ತನಿಖೆ ನಡೆಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry