ಶುಕ್ರವಾರ, ಜೂನ್ 25, 2021
29 °C

ಬಂಜಾರ ಸಮುದಾಯದ ಜಾಗೃತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಬಂಜಾರಾ ಜನಾಂಗದ ಸಾಕಷ್ಟು ಯುವಕರು ಶಿಕ್ಷಣ ಪಡೆದುಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಬಂಜಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಾನಸಿಂಗ್ ಚವ್ಹಾಣ ಹೇಳಿದರು.ತಾಲ್ಲೂಕಿನ ವೆಂಕಟೇಶ ನಗರದ ಸೇವಾಲಾಲ್ ಸಮುದಾಯ ಭವನ­ದಲ್ಲಿ ಈಚೆಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಳ್ಳ­ಲಾಗಿದ್ದ ತಾಂಡಾ ನಿವಾಸಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸಲು ಸಂಘದ ವತಿಯಿಂದ ಅನೇಕ ಕಾರ್ಯ­ಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಡಿ ಭಾಗದಲ್ಲಿನ ಹಿಂದುಳಿದ ಬಂಜಾರ ಸಮಾಜ ಆರ್ಥಿಕವಾಗಿ ಮುಂದೆ ಬರಬೇಕಿದೆ ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿ­ಸಿದ್ದ ರವಿ ರಾಠೋಡ್ ಸಿಂಧನೂರ ಮಾತನಾಡಿ, ಬಂಜಾರ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನ­ಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ಜನತೆ, ಜಿಲ್ಲೆಯ ಆಯಾ ಇಲಾಖೆ­ಗಳಿಗೆ ತೆರಳಿ ಮಾಹಿತಿ ಪಡೆದು­ಕೊಳ್ಳಬೇಕು. ಬಂಜಾರ ಸಮುದಾಯ­ದಲ್ಲಿ ಶಿಕ್ಷಣ ಪಡೆದುಕೊಂಡು ಯುವಜನತೆ ತಮಗಿರುವ ಸವಲತ್ತು­ಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದರು.ನಗರಸಭೆ ಸದಸ್ಯ ಶಂಕರ ರಾಠೋಡ್ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ನಿವೇಶನ ಸೇರಿದಂತೆ ಸ್ವಾವಲಂಬಿ ಜೀವನ ಸಾಗಿಸಲು ಆರ್ಥಿಕ ಬಲವರ್ಧನೆಗಾಗಿ ಸಾಕಷ್ಟು ಶ್ರಮಿಸು­ತ್ತಿದ್ದು,  ಈ ಬಗ್ಗೆ ಬಂಜಾರಾ ಸಮು­ದಾಯ ಅರಿವು ಮೂಡಿಸಿಕೊಳ್ಳಬೇಕು ಎಂದರು.ಯಾದಗಿರಿ ಗಡಿ ಭಾಗದ ಜಿಲ್ಲೆ­ಯಾಗಿದ್ದು, ಇಲ್ಲಿ ಸಾಕಷ್ಟು ಸಂಖ್ಯೆ­ಯಲ್ಲಿ ತಾಂಡಾ ನಿವಾಸಿಗಳಿದ್ದಾರೆ. ತಾಂಡಾದಲ್ಲಿ ವಾಸಿಸುವ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.ಎಪಿಎಂಸಿ ಅಧ್ಯಕ್ಷ ಭೀಮು ರಾಠೋಡ್, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ರಾಠೋಡ್, ಜಿಲ್ಲಾ ಘಟಕದ ಉಪಾಧ್ಯಕ್ಷ ಜನಾರ್ದನ ರಾಠೋಡ್, ಮನ್ನು ಚವ್ಹಾಣ, ಚಂದ್ರಶೇಖರ ಶಹಾಪುರ, ರಮೇಶ ಪವಾರ, ನೆಹರು ಚವ್ಹಾಣ, ಪ್ರೇಮ ಕುಮಾರ, ಅಮರೇಶ ರಾಠೋಡ್, ಪರಶುರಾಮ ಗುರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.