ಬುಧವಾರ, ಜೂಲೈ 8, 2020
21 °C

ಬಂಡವಾಳಶಾಹಿಗಳ ಮುಷ್ಠಿಯಲ್ಲಿ ಅರ್ಥ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ದೇಶದ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಕನಿಷ್ಠ ಕೂಲಿ ನಿಗದಿಗೊಳಿಸದ ಕಾರಣ ಕಾರ್ಮಿಕರು ಬದುಕು ನಡೆಸವುದೇ ಕಷ್ಟವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ತಿಳಿಸಿದರು. ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸಂಘ ಶನಿವಾರ ಏರ್ಪಡಿಸಿದ್ದ ಕೋರೆಂಗಾವ್ ಮಹಾಯುದ್ಧದ ವಿಜಯೋತ್ಸವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೋಷಿತರು ಸಂಘಟಿತರಾಗುವವರೆಗೆ ತುಳಿತಕ್ಕೆ ಒಳಗಾದವರ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ. ಕನಿಷ್ಠ ಕೂಲಿ, ಉತ್ತಮ ಬದುಕು ಪಡೆಯುವುದು ಸಾಧ್ಯವಾಗುವುದಿಲ್ಲ ಎಂದು ವಿಷಾದಿಸಿದರು. 

 

ಪುರಸಭಾಧ್ಯಕ್ಷ ಅಮರ್‌ಬಾಬು ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್ ಸಂಘದ ಕಚೇರಿ ಉದ್ಘಾಟಿಸಿದರು. ದಸಂಸ ಜಿಲ್ಲಾ ಸಂಚಾಲಕರಾದ ಅಂದಾನಿ ಸೋಮನಹಳ್ಳಿ ನಾಮಫಲಕ ಅನಾವರಣಗೊಳಿಸಿದರು. ಜಿಲ್ಲಾ ಸಂಚಾಲಕ ಶ್ರೀನಿವಾಸ್, ವಕೀಲ ಬಿ.ಟಿ.ವಿಶ್ವನಾಥ್, ಸುವರ್ಣ ಕರವೇ ತಾಲ್ಲೂಕು ಅಧ್ಯಕ್ಷ ನಗರಕೆರೆ ನವೀನ್ ಮಾತನಾಡಿದರು.ಪುರಸಭಾ ಸದಸ್ಯರಾದ ಫರ್ವಿಜ್‌ಖಾನ್, ಮಹದೇವಮ್ಮ ರಾಜು, ಮುಖಂಡರಾದ ಅಣ್ಣೂರು ರಾಜಣ್ಣ, ರಫೀಕ್ ಅಹಮದ್, ಮ.ನ.ಪ್ರಸನ್ನಕುಮ್ಾ, ಎಂ.ಟಿ.ಮಂಜುನಾಥ್, ಕರಿಯಪ್ಪ, ಎಂ.ಶಿವಪು, ಪಿ.ಸಂಜಯ್ ಇತರರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.