ಬಂಡವಾಳ ಆಕರ್ಷಣೆ: 5ನೇ ಸ್ಥಾನದಲ್ಲಿ ರಾಜ್ಯ -ಅಸೋಚಾಂ

7

ಬಂಡವಾಳ ಆಕರ್ಷಣೆ: 5ನೇ ಸ್ಥಾನದಲ್ಲಿ ರಾಜ್ಯ -ಅಸೋಚಾಂ

Published:
Updated:

ಬೆಂಗಳೂರು: ಬಂಡವಾಳ ಹೂಡಿಕೆಯಲ್ಲಿ ರಾಜ್ಯವು 5ನೇ ಸ್ಥಾನದಲ್ಲಿದ್ದು, 2011ರ ಹಣಕಾಸು ವರ್ಷದ ಅಂತ್ಯದ  ಹೊತ್ತಿಗೆ ರೂ 9.85 ಲಕ್ಷ ಕೋಟಿಗಳಷ್ಟು ಹೂಡಿಕೆ ಆಕರ್ಷಿಸಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ತಿಳಿಸಿದೆ. ಕೈಗಾರಿಕೆಗಳ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿ ಇರುವ ದೇಶದ 20  ರಾಜ್ಯಗಳ ಪೈಕಿ,ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿ ಇದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ ಮತ್ತು ಕರ್ನಾಟಕ ರಾಜ್ಯಗಳು ಇವೆ. ರೂ9 ಲಕ್ಷ ಕೋಟಿಗಳಷ್ಟು ಬಂಡವಾಳ ಆಕರ್ಷಿಸುವ ಮೂಲಕ ತಮಿಳುನಾಡು 6ನೇ ಸ್ಥಾನದಲ್ಲಿ ಇದೆ. ಒಟ್ಟು ಹೂಡಿಕೆಯ ಅರ್ಧದಷ್ಟು (ಶೇ 54ರಷ್ಟು) ಪಾಲು ಈ ಮೊದಲ ಐದು ರಾಜ್ಯಗಳ ಪಾಲಾಗಲಿದೆ ಎಂದು `ಅಸೋಚಾಂ~ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಡಿ.ಎಸ್. ರಾವತ್ ಹೇಳಿದ್ದಾರೆ.ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಒಳಗೆ ದೇಶದ ಎಲ್ಲ ರಾಜ್ಯಗಳಲ್ಲಿ ಹೂಡಿಕೆ ಆಗಲಿರುವ ಒಟ್ಟು ರೂ120 ಲಕ್ಷ ಕೋಟಿಗಳಷ್ಟು ಬಂಡವಾಳದಲ್ಲಿ, ಕರ್ನಾಟಕದ ಪಾಲು ಶೇ 8ರಷ್ಟು ಇರಲಿದೆ. ಬಂಡವಾಳ ಹೂಡಿಕೆಯ ಪ್ರಸ್ತಾವಗಳಲ್ಲಿ ರಾಜ್ಯವು ತಯಾರಿಕೆ ರಂಗದಲ್ಲಿ ಶೇ 39, ಸೇವಾ ವಲಯ- ಶೇ 25, ರಿಯಲ್ ಎಸ್ಟೇಟ್ - ಶೇ 15, ನೀರಾವರಿ ಶೇ 6 ಮತ್ತು ಗಣಿಗಾರಿಕೆಯಲ್ಲಿ ಶೇ 1.5ರಷ್ಟು ಆಕರ್ಷಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry