ಬಂಡವಾಳ ಹೂಡಿಕೆಗೆ ಮುಕ್ತ ಆಹ್ವಾನ

7

ಬಂಡವಾಳ ಹೂಡಿಕೆಗೆ ಮುಕ್ತ ಆಹ್ವಾನ

Published:
Updated:

ಬಾಗಲಕೋಟೆ: ತಾಂಜಾನಿಯಾ ದೇಶದ  ಕಿಗೋಮಾ ( ಜಿಜಟಞ) ಪ್ರಾಂತದಲ್ಲಿ ಕೃಷಿ, ಕೈಗಾರಿಕೆ ಮತ್ತು ಗಣಿಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಭಾರತೀಯರಿಗೆ ಮುಕ್ತ ಆಹ್ವಾನ ನೀಡುವುದಾಗಿ  ಆ  ಪ್ರಾಂತದ ಪ್ರಾದೇಶಿಕ ಆಯುಕ್ತ ಇಸಾಸ ಮಾಚಿಬಿಯಾ (ಐ~ ಞಚ್ಚಜಿಚಿ)  ತಿಳಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಭೂಮಿ, ಉತ್ತಮ ಮಳೆ, ನೈಸರ್ಗಿಕ ಸಂಪತ್ತನ್ನು ಹೊಂದಿರುವ ಕಿಗೋಮಾ ಪ್ರಾಂತದಲ್ಲಿ ಬಂಡವಾಳ ಹೂಡಿಕೆಗೆ ಭಾರತೀ ಯರನ್ನು ಮುಕ್ತವಾಗಿ ಆಹ್ವಾನಿಸುತ್ತೇವೆ ಎಂದರು.ಕೃಷಿಗೆ ಅಗತ್ಯವಿರುವ ಹೇರಳ ಭೂಮಿಯನ್ನು ಸರ್ಕಾರ ಒದಗಿಸಲು ಸಿದ್ಧವಿದೆ. ಬಂಡವಾಳ ಹೂಡಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಪಡಿಸುವ ಜೊತೆಗೆ ಕೈಗಾರಿಕೆ ಆರಂಭಿಸ ಬಹುದಾಗಿದೆ. ಬಂಡವಾಳ ಹೂಡಿಕೆ ದಾರರ ಆಕರ್ಷಣೆಗಾಗಿ ಸರ್ಕಾರ ಹಲವು ರಿಯಾಯಿತಿಗಳನ್ನೂ ನೀಡಲಿದೆ ಎಂದು ತಿಳಿಸಿದರು.`ಕಿಗೋಮಾದಲ್ಲಿ ಪ್ರಸ್ತುತ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆ ಯವರೇ ಕಬ್ಬು ಬೆಳೆದು, ಸಕ್ಕರೆ ಉತ್ಪಾದನೆ ಮಾಡುತ್ತಾರೆ. ನಮ್ಮ ಪ್ರಾಂತ್ಯದ ಆರ್ಥಿಕ ಬೆಳವಣಿಗೆ ಉದ್ದೇಶ ದಿಂದ ಬಂಡವಾಳ ಹೂಡಿಕೆದಾರರಿಗೆ ಕಬ್ಬು ಬೆಳೆಯುಲು ಅಗತ್ಯವಿರುವ ಭೂಮಿಯನ್ನು ಸರ್ಕಾರ ಒದಗಿಸಲು ಸಿದ್ಧವಿದೆ~ ಎಂದರು.ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರ ಸ್ಥಿತಿಗತಿ, ಸಕ್ಕರೆ ಕಾರ್ಖಾನೆಗಳ ಕಾರ್ಯ ಚಟುವಟಿಕೆ, ಕಬ್ಬು ಬೆಳೆಗಾರರಿಗೆ ಬ್ಯಾಂಕುಗಳಿಂದ ಸಿಗುವ    ಹಣಕಾಸು ಸೌಲಭ್ಯ   ಕುರಿತಂತೆ ಅಧ್ಯಯನ   ನಡೆಸಲಾಗಿದ್ದು, ಇಲ್ಲಿಯ ವಿಧಾನವನ್ನು ನಮ್ಮ ಪ್ರಾಂತ್ಯದಲ್ಲೂ ಅಳವಡಿಸಿ ಕೊಳ್ಳಲು ರೈತರಿಗೆ ಸಲಹೆ ಮಾಡಲಾಗುವುದು ಎಂದರು.ಈಗಾಗಲೇ ಬಾಗಲಕೋಟೆಯ `ಸಿಟಿ ಎನರ್ಜಿ ಮತ್ತು ಇನ್‌ಪ್ರಾಸ್ಟ್ರಕ್ಚರ್ ಕಂಪೆನಿಗೆ~  1.20 ಲಕ್ಷ ಎಕರೆ ಫಲವತ್ತಾದ ಭೂಮಿಯನ್ನು ಕಬ್ಬು ಬೆಳೆದು, ಸಕ್ಕರೆ ಕಾರ್ಖಾನೆ ತೆರೆಯಲು ನೀಡಲಾಗಿದೆ. ಇನ್ನೂ ಅನೇಕ ಕಂಪೆನಿಗಳೊಂದಿಗೆ ಚರ್ಚೆಯನ್ನು ನಡೆಸಲಾಗಿದೆ. ಅವರು ಸಹ  ಕೈಗಾರಿಕಾ ಆರಂಭಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.ಬಾಗಲಕೋಟೆ ಜಿಲ್ಲೆಯಲ್ಲಿರುವ ಐಸಿಪಿಎಲ್ ಸಕ್ಕರೆ ಕಾರ್ಖಾನೆ ಮತ್ತು ಎಸ್‌ಎಸ್‌ಕೆ ಕಾರ್ಖಾನೆಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಇದೇ13 ರಂದು ಗೋವಾಕ್ಕೆ ಭೇಟಿ ನೀಡಿ ಮೀನುಗಾರಿಕೆ ಬಗ್ಗೆ ಅಧ್ಯಯನ ನಡೆಸಲಾಗುವುದು ಬಳಿಕ ಬೆಳಗಾವಿಗೆ ಭೇಟಿ ನೀಡಿ ವಿಶೇಷ ಆರ್ಥಿಕ ವಲಯ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry