ಮಂಗಳವಾರ, ಏಪ್ರಿಲ್ 20, 2021
24 °C

ಬಂಡವಾಳ ಹೂಡಿಕೆ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ದೇಶದ ಉದ್ಯಮ ಕ್ಷೇತ್ರಗಳಲ್ಲಿನ ಹೊಸ ಹೂಡಿಕೆ ಶೇ 33ರಷ್ಟು ಭಾರಿ ಪ್ರಮಾಣದಲ್ಲಿ ತಗ್ಗಿದ್ದು ಕಳವಳಕ್ಕೆ ಕಾರಣವಾಗಿದೆ.ಜುಲೈ-ಸೆಪ್ಟೆಂಬರ್ ನಡುವೆ ಕೇವಲ ರೂ. 58,494 ಕೋಟಿಯಷ್ಟು ಬಂಡವಾಳ ಹೂಡಿಕೆಯಾಗಿದೆ.  ಖಾಸಗಿ ಕ್ಷೇತ್ರದ ಉದ್ದಿಮೆಗಳಿಂದ ರೂ. 35,368 ಕೋಟಿ, ಸರ್ಕಾರಿ ಒಡೆತನದ ಉದ್ಯಮಗಳಲ್ಲಿ ರೂ. 23,126 ಕೋಟಿ ಹೂಡಿಕೆ ಆಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ `ಭಾರತದ ಆರ್ಥಿಕ ವ್ಯವಸ್ಥೆ ನಿಗಾ ಸಂಸ್ಥೆ~(ಸಿಎಂಐಇ) ಮಾಸಿಕ ವರದಿ ತಿಳಿಸಿದೆ.ಕೇರಳ, ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಈ ಅವಧಿಯಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಉತ್ತಮವಾಗಿದೆ. ಉಳಿದ ರಾಜ್ಯಗಳಲ್ಲಿನ ಬಂಡವಾಳ ಹೂಡಿಕೆ ಮೊತ್ತ ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿಯೇ ಕಡಿಮೆ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.ಉಕ್ಕು, ವಿದ್ಯುತ್ ಸರಬರಾಜು ಮತ್ತು ರಸ್ತೆ ಸಾರಿಗೆ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ವಲಯಗಳ ಉದ್ಯಮದಲ್ಲಿಯೂ ಹೊಸದಾಗಿ ಬಂಡವಾಳ ಹೂಡಿಕೆ ಪ್ರಮಾಣ 2ನೇ ತ್ರೈಮಾಸಿದಲ್ಲಿ ತಗ್ಗಿದೆ.ವರ್ಷಂಪ್ರತಿ ಇಳಿಕೆ

2003-04ರಲ್ಲಿ ಇಡೀ ವರ್ಷದಲ್ಲಿ ದೇಶದಲ್ಲಿನ ಬಂಡವಾಳ ಹೂಡಿಕೆ ಕೇವಲ ರೂ. 3 ಲಕ್ಷದಷ್ಟಿದ್ದಿತು. ನಂತರ 2008-09ರ ವೇಳೆಗೆ ಹೂಡಿಕೆಯ ಹರಿವು ಹೆಚ್ಚಿತು. ಆ ವರ್ಷ ದೇಶದ ಉದ್ಯಮ ವಲಯದಲ್ಲಿ ಒಟ್ಟು 22.6 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದ್ದಿತು. ಆದರೆ, ನಂತರದಲ್ಲಿ ಮತ್ತೆ ಇಳಿಮುಖವಾಯಿತು ಎಂದು `ಸಿಎಂಐಇ~ ವರದಿ ಅಂಕಿ-ಅಂಶ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.