ಬಂಡವಾಳ ಹೂಡಿಕೆ: 20ರಂದು ಕೊಯಮತ್ತೂರಿನಲ್ಲಿ ‘ರೋಡ್‌ ಷೋ’

7

ಬಂಡವಾಳ ಹೂಡಿಕೆ: 20ರಂದು ಕೊಯಮತ್ತೂರಿನಲ್ಲಿ ‘ರೋಡ್‌ ಷೋ’

Published:
Updated:

ಬೆಂಗಳೂರು: ನೆರೆಯ ತಮಿಳುನಾಡು ರಾಜ್ಯದ ಉದ್ಯಮಿಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲು ಜ. 20ರಂದು ಕೊಯಮತ್ತೂರಿನಲ್ಲಿ ‘ರೋಡ್‌ ಷೋ’ ಆಯೋಜಿಸಲಾಗಿದೆ.ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರೂ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವಾಣಿಜ್ಯ ಮತ್ತು ಕೈಗಾರಿಕೆ) ಎಂ.ಎನ್‌. ವಿದ್ಯಾಶಂಕರ್‌ ಮತ್ತು ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಆರ್‌.ಶಿವಕುಮಾರ್‌ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಈ ಮಾಹಿತಿ ನೀಡಿದರು.‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಚಾಮರಾಜನಗರ ಜಿಲ್ಲೆಯ ಕೆಲ್ಲಂಬಳ್ಳಿ, ಬದನಕುಪ್ಪೆ ಗ್ರಾಮಗಳಲ್ಲಿ ಸುಮಾರು 1362 ಎಕರೆ 9 ಗುಂಟೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ’ ಎಂದು ವಿವರಿಸಿದರು.‘ಸೇಲಂ, ತಿರುಪುರ್‌, ಈರೋಡ್‌, ಮೆಟ್ಟುಪಾಳ್ಯಂ, ಗೋಬಿ, ಚೆಟ್ಟಿಪಾಳ್ಯಂ, ಅವಿನಾಶಿ ಮತ್ತಿತರ ನಗರಗಳ ಉದ್ಯಮಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ಚಾಮರಾಜನಗರದಲ್ಲಿ ಬೃಹತ್‌ ಕೈಗಾರಿಕಾ ಮೇಳವನ್ನು ಸಂಘಟಿಸಲಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry