ಗುರುವಾರ , ನವೆಂಬರ್ 14, 2019
18 °C

ಬಂಡಾಯಗಾರರನ್ನು ಕಣದಿಂದ ಹಿಂದೆ ಸರಿಸುವ ಯತ್ನ ಆರಂಭ

Published:
Updated:

ಮಂಡ್ಯ: ಪಕ್ಷದಿಂದ ಸಿಡಿದು ಬಂಡಾಯವಾಗಿ ಸ್ಪರ್ಧಿಸಿರುವ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ವಿವಿಧ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರುಗಳು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.ಪ್ರಮುಖ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲು ಪಕ್ಷದ ಮುಖಂಡರಿಂದ ಒತ್ತಡ ಹಾಕಿಸುವ ಕೆಲಸಕ್ಕೆ ಅಭ್ಯರ್ಥಿಗಳು ಕೈ ಹಾಕಿದ್ದಾರೆ.ಮತ ಒಡೆದು ಹಾನಿ ಉಂಟು ಮಾಡಬಹುದಾದ ಪಕ್ಷೇತರ ಅಭ್ಯರ್ಥಿಗಳನ್ನೂ ಕಣದಿಂದ ಹಿಂದೆ ಸರಿಸುವ ಅಂಗವಾಗಿ ಅವರೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಅವರ ಬೇಡಿಕೆಗಳನ್ನು ಈಡೇರಿಸಿ, ತಮ್ಮ ಪರವಾಗಿ ಪ್ರಚಾರ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)