ಬಂಡಾಯ ಕೇಂದ್ರವಾಗಿ ವಿಶ್ವಶ್ರಮ ಚೇತನ

7

ಬಂಡಾಯ ಕೇಂದ್ರವಾಗಿ ವಿಶ್ವಶ್ರಮ ಚೇತನ

Published:
Updated:

ಹುಬ್ಬಳ್ಳಿ: `ಹೊಸ ಸಮಾಜವಾದಿ ಕಟ್ಟುವ ಸ್ಥಳವಾಗಿ ಹಾಗೂ ಶೋಷಣೆ ವಿರುದ್ಧ ಹೋರಾಡುವ ಬಂಡಾಯ ಕೇಂದ್ರವಾಗಿ ವಿಶ್ವಶ್ರಮ ಚೇತನವು ಹೊರ ಹೊಮ್ಮಲಿದೆ~ ಎಂದು ಹೋರಾಟಗಾರ, ಸಾಹಿತಿ, ಶಿಕ್ಷಣತಜ್ಞ ಡಾ.ಕೆ.ಎಸ್. ಶರ್ಮಾ ಹೇಳಿದರು.ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನ ಆವರಣದಲ್ಲಿ ಡಾ.ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳು ಭಾನುವಾರ ಏರ್ಪಡಿಸಿದ ತಮ್ಮ 79ನೇ ಜನ್ಮದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.`ಬರಗಾಲ, ಬವಣೆ, ಬಡತನ, ಸಾಮ್ರಾಜ್ಯಶಾಹಿ ವಿಸ್ತರಣೆ, ವಸಾಹತುಶಾಹಿ ಹೆಚ್ಚುತ್ತಿದೆ. ಇದರ ಪರಿಣಾಮ ಎಫ್‌ಡಿಐ (ವಿದೇಶಿ ನೇರ ಬಂಡವಾಳ ಹೂಡಿಕೆ) ಆಗುತ್ತಿದೆ. ಇದರಿಂದ ಈ ದೇಶದ ಬಡ ಜನರನ್ನು ಹೊಸ ಗುಲಾಮಗಿರಿಗೆ ತಳ್ಳಲಾಗುತ್ತಿದೆ. ಈ ವ್ಯವಸ್ಥೆಯ ಬದಲಾವಣೆಗಾಗಿ ಕ್ರಾಂತಿಕಾರಕ ಹೋರಾಟದ ಅಗತ್ಯವಿದೆ~ ಎಂದರು.`ಜನ್ಮದಿನ ಎನ್ನುವುದು ನೆಪ. ಸಂಗಾತಿಗಳನ್ನು ಒಂದೆಡೆ ಕಲೆ ಹಾಕುವ ಸಂದರ್ಭವಿದು. ಇದು ಸಂಭ್ರಮಾಚರಣೆಯಲ್ಲ. ಹೋರಾಟ ಮಾಡುತ್ತೇವೆ ನ್ನುವ ಬದ್ಧತೆಗೆ ಒಳಗಾಗುವ ಸಮಾರಂಭ. ದೇಶದಲ್ಲಿ ಬಂಡವಾಳಶಾಹಿಗಳ ನಿರಂಕುಶ ಅಧಿಕಾರವಿದೆ. ಇದಕ್ಕಾಗಿ ನಿರಂಕುಶ ಅಧಿಕಾರವನ್ನು ಸಮಾಧಿ ಮಾಡಿ ಪ್ರಜಾಸತ್ತೆ ಸ್ಥಾಪಿಸೋಣ. ಹೋರಾಟ ಇಲ್ಲದೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ~ ಎಂದು ಎಚ್ಚರಿಸಿದರು.`ದಿನಗೂಲಿಗಳು ಕಾಯಂ ಆಗಿ ಆರಾಮವಾಗಿದ್ದಾರೆ. ಆದರೆ ದಂಡಪಿಂಡಗಳಾಗ ಬೇಡಿ. ನೊಂದವರ, ಬೆಂದವರ ಪರವಾಗಿ ದುಡಿಯಿರಿ~ ಎಂದು ಅವರು ಸಲಹೆ ನೀಡಿದರು.ಶರ್ಮಾ ಅವರ ಸಮಗ್ರ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ವಿಶ್ಲೇಷಣೆಯ ಕುವಲಯ ಬರಹಗಳು-9 ಹಾಗೂ ಕುವಲಯ ಬರಹಗಳು-10 ಕೃತಿಗಳ ಜೊತೆಗೆ ಡಾ.ಗಂಗಾಧರ ವರ್ಮಾ ಅವರ `ಕಾಂಸ್ಟಿಪೆಶನ್: ರೆಮೆಡಿ ಥ್ರೂ ನ್ಯಾಚುರೊಪತಿ~ ಕೃತಿ ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡವು. ಕಾರ್ಲ್ ಮಾರ್ಕ್ಸ್ ಪ್ರಶಸ್ತಿಯನ್ನು ಈ ಬಾರಿ ಡಾ.ಎಂ.ಸಿ. ನರಸಿಂಹನ್ ಅವರಿಗೆ ಪ್ರದಾನ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಭಾರತ ಏಕತಾ ಆಂದೋಲನ ಪ್ರಧಾನ ಕಾರ್ಯದರ್ಶಿ ಮಹಾದೇವ ಹೊರಟ್ಟಿ, ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ನಿರ್ದೇಶಕ ಡಾ.ಶ್ಯಾಮ ಸುಂದರ ಬಿದರಕುಂದಿ ಪಾಲ್ಗೊಂಡಿದ್ದರು.ಶರ್ಮಾ ಅವರನ್ನು ಅಭಿನಂದಿಸಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಬಿ.ಎಫ್. ಬಿಜಾಪುರ, ಡಾ.ವಾಮನ ಬೇಂದ್ರೆ, ಕರ್ನಾಟಕ ವಿವಿಯ ಕುಲಸಚಿವ ಡಾ.ಕೆ. ದುರ್ಗಾದಾಸ, ಶಿಕ್ಷಣ ತಜ್ಞ ಪ್ರಕಾಶ ಪ್ರಭು, ವೈದ್ಯ ಡಾ.ಗಂಗಾಧರ ವರ್ಮಾ ಮಾತನಾಡಿದರು. ರವೀಂದ್ರ ಶಿರೋಳಕರ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry