ಗುರುವಾರ , ಫೆಬ್ರವರಿ 25, 2021
19 °C

ಬಂಡೀಪುರ; ಗುಂಡೇಟಿಗೆ ಹುಲಿ ಬಲಿ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡೀಪುರ; ಗುಂಡೇಟಿಗೆ ಹುಲಿ ಬಲಿ ಶಂಕೆ

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಗಂಡು ಹುಲಿಯೊಂದು ಮೃತಪಟ್ಟಿದ್ದು, ಬೇಟೆಗಾರರ ಗುಂಡೇಟಿಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.ಮದ್ದೂರು ಅರಣ್ಯ ವಲಯದ ಹೊಂಗಹಳ್ಳಿ ಗಸ್ತು ಪ್ರದೇಶದ ಸೋಮೇಗೌಡನ ಕಟ್ಟೆ ಬಳಿ ಭಾನುವಾರ 12 ವರ್ಷ ಪ್ರಾಯದ ಹುಲಿಯ ಶವ ಪತ್ತೆ ಆಗಿದೆ, ನೀರಿನಲ್ಲಿ ತೇಲುತ್ತಿದ್ದ ಶವವನ್ನು ಗಸ್ತಿನಲ್ಲಿದ್ದ ಸಿಬ್ಬಂದಿ ಗುರುತಿಸಿದ ಬಳಿಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಮೂರು ದಿನಗಳ ಹಿಂದೆ ಹುಲಿಗೆ ಗುಂಡೇಟು ಬಿದ್ದಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಸುಟ್ಟುಹಾಕಲಾಯಿತು.‘ಹುಲಿಯ ಮುಂಗಾಲಿಗೆ ಗಾಯವಾಗಿದೆ, ಹುಲಿಯ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಅಲ್ಲಿಂದ ವರದಿ ಬಂದ ನಂತರ ಹುಲಿಯ ಸಾವಿನ ಸತ್ಯಾಂಶ ತಿಳಿಯಲಿದೆ’ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಟಿ.ಹೀರಾಲಾಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.