ಬಂತು ಮೆಕ್ಸಿಕನ್ ಮಲ್ಟಿಪ್ಲೆಕ್ಸ್

7

ಬಂತು ಮೆಕ್ಸಿಕನ್ ಮಲ್ಟಿಪ್ಲೆಕ್ಸ್

Published:
Updated:
ಬಂತು ಮೆಕ್ಸಿಕನ್ ಮಲ್ಟಿಪ್ಲೆಕ್ಸ್

ಸಿನಿಪ್ರಿಯರಿಗೆ ಸಂತಸದ ಸುದ್ದಿ! ಅತ್ಯುನ್ನತ ಗುಣಮಟ್ಟ, ಡಿಜಿಟಲ್ ತಂತ್ರಜ್ಞಾನದ ಮೂಲಕ ಚಿತ್ರಗಳನ್ನು ಪ್ರದರ್ಶಿಸುತ್ತ ಹೆಸರು ಗಳಿಸಿರುವ ವಿಶ್ವ ಮಟ್ಟದ 4ನೇ ಅತಿದೊಡ್ಡ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಸರಣಿ ಮೆಕ್ಸಿಕೊ ಮೂಲದ ‘ಸಿನೆಪೊಲಿಸ್’ ಈಗ ಬೆಂಗಳೂರಿಗೂ ಬಂದಿದೆ.ಬನ್ನೇರುಘಟ್ಟ ಮುಖ್ಯರಸ್ತೆ ಮೀನಾಕ್ಷಿ ದೇವಸ್ಥಾನದ ಬಳಿ  ನೂತನವಾಗಿ ನಿರ್ಮಾಣವಾಗಿರುವ ‘ರಾಯಲ್ ಮೀನಾಕ್ಷಿ ಮಾಲ್’ನಲ್ಲಿ ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ.ವಿಶ್ವ ದರ್ಜೆಯ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ 3 ಡಿ ಸ್ಕ್ಕ್ರಿನ್ ಹಾಗೂ ಮ್ಯಾಕ್ರೋ ಸ್ಕ್ಕ್ರಿನ್ ಸೇರಿದಂತೆ ಒಟ್ಟು ಏಳು ಪರದೆಗಳು (ಮಿನಿ ಚಿತ್ರಮಂದಿರಗಳು), 1328 ಸುಖಾಸನಗಳನ್ನು ಹೊಂದಿದ್ದು, ದಿನವೊಂದಕ್ಕೆ 35 ಪ್ರದರ್ಶನಗಳಿರುತ್ತವೆ.ಅತ್ಯುತ್ತಮ ಆಡಿಯೋ ತಂತ್ರಜ್ಞಾನ, 3ಡಿ ಅನುಭವ, ವಿಶಾಲವಾದ ಆಸನ, ರುಚಿಯಾದ ತಾಜಾ ತಿಂಡಿ ತಿನಿಸು ಪೂರೈಕೆ ಕೇಂದ್ರ ಇಲ್ಲಿದೆ. ‘ನಗರದ ಸಿನಿಮಾ ಪ್ರಿಯರಿಗೆ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಮೂಲಕ ಸಿನಿಮಾ ವೀಕ್ಷಣೆ ಸೌಲಭ್ಯ ಇಲ್ಲಿ ದೊರೆಯಲಿದೆ. ವಿಶ್ವಮಟ್ಟದ ಸಿನಿಮಾ ಆಪರೇಟರ್‌ಗಳು ಇಲ್ಲಿದ್ದಾರೆ.

 

ಇಲ್ಲಿ ಸಿನಿಮಾ ನೋಡುವುದೇ ವಿಶಿಷ್ಟ ಅನುಭವ ನೀಡಲಿದೆ. ಪ್ರಾದೇಶಿಕ ಭಾಷೆ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಟಿಕೆಟ್ ದರ ಕೂಡ ಎಲ್ಲ ಆದಾಯ ವರ್ಗದವರಿಗೂ ಕೈಗೆಟಕುವಂತೆ  60ರಿಂದ 180 ರೂಪಾಯಿ ವರೆಗೆ ನಿಗದಿ ಪಡಿಸಲಾಗಿದೆ’ ಎನ್ನುತ್ತಾರೆ ಸಿನೆಪೊಲಿಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮಿಲನ್ ಸೈನಿ ಹಾಗೂ ಚಿತ್ರಮಂದಿರದ ಸಹಭಾಗಿ ಯು.ಬಿ. ವೆಂಕಟೇಶ್.www.cinepolis.in  ಜಾಲತಾಣದ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆ ಇದೆ. ಎಸ್‌ಎಂಎಸ್ ಮೂಲಕವೂ ಟಿಕೆಟ್‌ನ್ನು ಕಾಯ್ದಿರಿಸಬಹುದು.   

                                        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry