ಬಂತು ‘ಕೋಚಡಯಾನ್‌’ ಮೊದಲ ಪ್ರೋಮೊ

7

ಬಂತು ‘ಕೋಚಡಯಾನ್‌’ ಮೊದಲ ಪ್ರೋಮೊ

Published:
Updated:

ರಜನೀಕಾಂತ್‌ ಬಹು ನಿರೀಕ್ಷಿತ ಚಿತ್ರ ‘ಕೋಚಡಯಾನ್‌’ನ ಅಧಿಕೃತ ಪ್ರೋಮೊ ಗಣೇಶನ ಹಬ್ಬದ ದಿನ ಬಿಡುಗಡೆಯಾಗಿದೆ.ಅರವತ್ತೆರಡು ವರ್ಷ ವಯಸ್ಸಿನ ರಜನಿ ತಮ್ಮ ಹುರಿಗಟ್ಟಿದ ದೇಹವನ್ನು ತೋರುವಂಥ ಪ್ರೋಮೊ ಕಂಡು ಅವರ ಅಭಿಮಾನಿಗಳು ಆನಂದತುಂದಿಲರಾಗಿದ್ದಾರೆ. ರಜನಿ ಪುತ್ರಿ ಸೌಂದರ್ಯಾ ಆರ್‌.ಅಶ್ವಿನ್‌ ಚೊಚ್ಚಿಲ ನಿರ್ದೇಶನದ ಈ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ. ಆದರೆ, ಮೊದಲ ಪ್ರೋಮೋದಲ್ಲಿ ದೀಪಿಕಾ ಉಪಸ್ಥಿತಿ ಇಲ್ಲ.ಬಹುದಿನಗಳಿಂದ ಚಿತ್ರೀಕರಣ ನಡೆಸುತ್ತಿರುವ ‘ಕೋಚಡಯಾನ್‌’ ಎಂದು ತೆರೆಕಾಣಲಿದೆ ಎಂಬ ನಿರೀಕ್ಷೆ ಅನೇಕರಿಗೆ ಇದೆ. ಮೋಶನ್‌ ಕ್ಯಾಪ್ಚರ್‌ ಟೆಕ್ನಾಲಜಿ ಬಳಸಿ ತಯಾರಾಗುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಅಗ್ಗಳಿಕೆ ಅದರದ್ದು.ದೀಪಿಕಾ ಪಡುಕೋಣೆ ಇತ್ತೀಚಿನ ಯಾವ ಸಂದರ್ಶನದಲ್ಲೂ ಈ ಚಿತ್ರದ ಕುರಿತು ಏನನ್ನೂ ಹೇಳುತ್ತಿಲ್ಲ. ಆದರೆ, ಸೌಂದರ್ಯ ಅವರ ಪಾತ್ರದ ಹೆಸರು ವದನಾ ದೇವಿ ಎಂದು ಟ್ವೀಟ್‌ ಮಾಡಿದ್ದಾರೆ. ಮುಂದಿನ ಪ್ರೋಮೋಗಳಲ್ಲಿ ದೀಪಿಕಾ ಕೂಡ ಇರುತ್ತಾರೆಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.ಎ.ಆರ್‌. ರೆಹಮಾನ್‌ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಅಕ್ಟೋಬರ್‌ನಲ್ಲಿ ಆಡಿಯೋ ಬಿಡುಗಡೆಯಾಗುವ ಸಾಧ್ಯತೆ ಇದೆ.ಎಂಟನೇ ಶತಮಾನದ ಪಾಂಡಿಯನ್‌ ರಾಜ ಕೋಚಡಯಾನ್‌ ರಣಧೀರನ್‌ನ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದ್ದು, ರಜನಿ ತಮ್ಮ ವಯಸ್ಸನ್ನು ಮರೆಮಾಚುವಂಥ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.‘ಹೀರೊಗಳು ಹಲವರು. ಸೂಪರ್‌ಹೀರೋಗಳು ಕೆಲವರು. ಆದರೆ, ಇವನು ಒಬ್ಬನೇ...’ ಎಂಬರ್ಥದ ಮಾತಿನೊಂದಿಗೆ ರಜನಿ ಎಂಟ್ರಿ ಕೊಡುವ ದೃಶ್ಯವನ್ನು ಮೊದಲ ಪ್ರೋಮೊ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry