ಬಂಥನಾಳ ರಸ್ತೆ ದುರಸ್ತಿಗೆ ಆಗ್ರಹ

6

ಬಂಥನಾಳ ರಸ್ತೆ ದುರಸ್ತಿಗೆ ಆಗ್ರಹ

Published:
Updated:

 


ತಾಂಬಾ: ಸಮೀಪದ ಬಂಥನಾಳದಿಂದ ಸುರಗೀಹಳ್ಳಿಯವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಗೊಳಿಸಬೇಕು ಎಂದು ಜೆ.ಡಿ.ಎಸ್. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಾಂತನಗೌಡ ಪಾಟೀಲ ಒತ್ತಾಯಿ ಸಿದ್ದಾರೆ.

 

ಬಂಥನಾಳ ದಿಂದ ಸುರಗೀಹಳ್ಳಿ ಗ್ರಾಮಕ್ಕೆ ಬಂದು ಸೇರುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಇದ ರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಖಾಸಗಿ ವಾಹನ ಗಳ ಚಾಲಕರು ಗ್ರಾಮಕ್ಕೆ ವಾಹನ ಗಳನ್ನು ತರಲು ಹಿಂಜರಿಯುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣ ರಸ್ತೆ ಕಾರ್ಯವನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

 

ಸುರಗ್ಗಿಹಳ್ಳಿ ಸಿಂದಗಿ ತಾಲ್ಲೂಕಿನ ಕೊನೆಯ ಹಳ್ಳಿಯಾದರೆ, ಬಂಥನಾಳ ಗ್ರಾಮವು ಇಂಡಿ ತಾಲ್ಲೂಕಿನ ಕೊನೆಯ ಗ್ರಾಮ. ಎರಡು ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ರಸ್ತೆ ಉದ್ದಕ್ಕೂ ಜಾಲಿ ಬೆಳೆದುಕೊಂಡಿದೆ ಎಂದು ಹೇಳಿದ್ದಾರೆ.

 

ಬಂಥನಾಳ- ಸುರಗೀಹಳ್ಳಿ ರಸ್ತೆಯನ್ನು ದುರಸ್ತಿಗೊಳಿಸಿ ಗ್ರಾಮಸ್ಥರ ಸಮಸ್ಯೆಯನ್ನು ನಿವಾರಿಸಬೇಕು ಎಂದು ಸಂಜೀವ್ ಹತ್ತಿ, ಕಾಶೀನಾಥ ಮುದೋಡಗಿ, ಅಸ್ಲ್ ಮುಲ್ಲಾ, ಕಾಶೀನಾಥ ಜಾಧವ, ಪ್ರಭಾಕರ್ ಹೀರೋಳ, ಈರಣ್ಣ ಭಾಸಗಿ, ಅಂಬಣ್ಣ ಪವಾರ  ಒತ್ತಾಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry