ಬಂದಾರ ಕಾಮಗಾರಿ ಗುಣಮಟ್ಟ: ಸಚಿವರ ಮೆಚ್ಚುಗೆ

7

ಬಂದಾರ ಕಾಮಗಾರಿ ಗುಣಮಟ್ಟ: ಸಚಿವರ ಮೆಚ್ಚುಗೆ

Published:
Updated:

ಅಳ್ನಾವರ: ಸಮೀಪದ ಡೋರಿ ಗ್ರಾಮದ ಹಳ್ಳಕ್ಕೆ ರೂ 1.16 ಲಕ್ಷದಲ್ಲಿ  ನಿರ್ಮಿಸಿದ ಬಾಂದಾರ ಕಾಮಗಾರಿ ಹಾಗೂ ಬೆಣಚಿ ಹಳ್ಳಕ್ಕೆ ರೂ 1.22 ಲಕ್ಷ ವೆಚ್ಚದಲ್ಲಿ  ಸಣ್ಣ ನೀರಾವರಿ ಇಲಾಖೆಯವರು ನಿರ್ಮಿಸಿದ ಬಾಂದಾರ ಕೆಲಸವನ್ನು ಸಚಿವ ಗೋವಿಂದ ಕಾರಜೋಳ ಶನಿವಾರ ವೀಕ್ಷಿಸಿದರು. ಡೋರಿ ಹಳ್ಳಕ್ಕೆ ಅಡ್ಡಲಾಗಿ ತ್ವರಿತ ನೀರಾವರಿ ಯೋಜನೆಯಡಿ  ಬಾಂದಾರ ಕಟ್ಟಲಾಗಿದ್ದು, ಉತ್ತಮ ಗುಣ ಮಟ್ಟದ ಕೆಲಸ ಆಗಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದ ಸಚಿವರು ಇಲ್ಲಿನ ನೀರು ನಿಲುಗಡೆಯಿಂದ ಸುಮಾರು  89 ಹೇಕ್ಟರ್ ಪ್ರದೇಶ ನೀರಾವರಿಗೆ ಒಳಪಡುತ್ತದೆ ಮತ್ತು ಬೆಣಚಿ ಬ್ಯಾರೇಜಿನಲ್ಲಿ ಶೇಖರಣೆಯಾದ ನೀರು 97 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಅನುಕೂಲ ಕಲ್ಪಿಸಲಿದೆ ಎಂದರು.   ಮನವಿ: ಬೆಣಚಿ ಗ್ರಾಮದಲ್ಲಿ 55 ವರ್ಷದ ಹಿಂದೆ ಕಟ್ಟಿದ ರಹಿಮಾನ ಕೆರೆ ದುರಸ್ತಿ ಮತ್ತು ಕಾಲುವೆ ನಿರ್ಮಾಣ ಕಾರ್ಯ ಆಗಬೇಕು. ಕೆರೆಗೆ ಹರಿದು ಬರುವ ಒಳ ಹರಿವು ಭಾಗವನ್ನು ರಿಪೇರಿ ಮಾಡಿದರೆ ಚ್ಚು ನೀರು ಸಂಗ್ರಹವಾಗುತ್ತದೆ , ಡೋರಿ ಗ್ರಾಮದ ಕಡೆಯಿಂದ ಹರಿಯುವ ಹಳ್ಳಕ್ಕೆ ಬಾಲಗೇರಿ ಹಳ್ಳಕ್ಕೂ ಬಾಂದರ ನಿರ್ಮಿಸ ಬೇಕು. ಬೆಣಚಿ ಸಮೀಪದ ಮುತ್ತಲಮುರಿ ಹತ್ತಿರ ಹಳ್ಳಕ್ಕೆ ಸೇತುವೆಯ ಬಾಂದಾರ ಕಟ್ಟಿದರೆ ಅದು ಸಕ್ಕರೆ ಕಾರ್ಖಾನೆ ಕಡಿಮೆ ಸಮಯದಲ್ಲಿ ಕಬ್ಬು ಕಳುಹಿಸಲು ಅನುಕೂಲ ವಾಗುತ್ತದೆ ಎಂದು ಮನವಿ ಅರ್ಪಿಸಲಾಯಿತು. ಡೋರಿ ಗ್ರಾಮಕ್ಕೆ ಅಡ್ಡಲಾಗಿ ಕಟ್ಟದ ಬ್ಯಾರೇಜಿನ ಎರಡು ಬಡಿಯಲ್ಲಿ ಕಲ್ಲಿನ ಹೊದಿಕೆ ಅಳವಡಿಸಲು  ಹಾಗೂ ಕೋಗಿಲಗೇರಿ ಗ್ರಾಮದ ಹಳ್ಳಕ್ಕೆ ಕಟ್ಟುತ್ತಿ ರುವ ಬಾಂದಾರ ಕೆಲಸ ಅರ್ಧಕ್ಕೆ ನಿಂತಿದ್ದು, ಈ ಬಾಂದರಗೆ ಶೀಘ್ರದಲ್ಲಿ ಗೇಟ ಅಳವಡಿಸಬೇಕು ಎಂದು ಗ್ರಾಮ ಸ್ಥರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಈ ಭಾಗದಲ್ಲಿ ಭಾಂದಾರ ಕಟ್ಟಲು ರೈತರು ಸ್ವಯಂ ಖುಷಿಯಿಂದ ಮುಂದೆ ಬರುತ್ತಿ ರುವದು ಸಂತೋಷದ ವಿಷಯ. ಹಲ ವಾರು ಭಾಗದಲ್ಲಿ ಭಾಂದಾರ ನಿರ್ಮಿ ಸಲು ವಿರೋದಿಸುವ ಜನ ಕೂಡಾ ಅಲ್ಲಲ್ಲಿ ಇದ್ದಾರೆ . ಆದರ ಈ ಭಾಗದ ರೈತರು ನೀರಿನ ಮಹತ್ವ ಅರಿತಿರುವದು ಗಮ ನಾರ್ಹ ಎಂದರು.ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಮಾತನಾಡಿ, ರಾಜ್ಯ ಸರಕಾರ ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ನೀರನ್ನು ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಸಬೇಕು. ನೀರು ನಿಲುಗಡೆಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಒಳ ಹರಿವು ಇರುವಲ್ಲಿ ಬಾಂದಾರ ಕಟ್ಟಿದಲ್ಲಿ ರೈತರಿಗೆ ತುಂಬಾ ಸಹಕಾರಿ ಯಾಗಲಿದೆ  ಮತ್ತು  ಬಹು ಸಂಸ್ಕೃತಿ ಯನ್ನು ಹೊಂದಿದ ಗಡಿ ಭಾಗವಾದ ಅಳ್ನಾರವದಲ್ಲಿ ಕನ್ನಡ ಭವನ ನಿರ್ಮಿ ಸುವದು ಅಗತ್ಯವಿದೆ ಎಂದರು. ಶಶಿಧರ ಇನಾಮದಾರ. ಜಿಲ್ಲಾ ಪಂಚಾಯಿತ ಸದಸ್ಯೆ ಹನಮವ್ವ ಬಿಂಗಿ, ತಾ.ಪಂ. ಸದಸ್ಯೆ ಸ್ನೇಹಶ್ರೀ ಕಿತ್ತೂರ, ಬಾಬು ಕೋನೆವಾಡಿ, ಲಿಂಗರಾಜ ಮೂಲಿಮನಿ, ಅಡಿವೆಪ್ಪ ಶಿಂಧೆ, ಪ್ರವೀಣ ಪವಾರ, ಮಲ್ಲಿಕಾರ್ಜುನ ಹಿರೇಮಠ, ನಾರಾಯಣ ಮೋರೆ, ತುಕಾರಾಮ ಪಾಟೀಲ, ಭರತೇಶ ಪಾಟೀಲ, ಸಣ್ಣ ನೀರಾವರಿ ಇಲಾಖೆಯ ಬೆಳಗಾವಿಯ ಅಧೀಕ್ಷಕ ಅಭಯಂತರು ಎಚ್.ಸುರೇಶ, ಕಾರ್ಯ ನಿರ್ವಾಹಕ ಅಭಯಂತರು ಜಿ.ಎ. ವಾಲಿ, ಸಹಾಯಕ ಅಭಯಂತರು ಆರ್. ಎಂ. ದಫೇದಾರ, ತಮ್ಮನಗೌಡರ, ಸುರೇಶ ಪಾಟೀಲ , ನಾಗೇಂದ್ರ ಕಮ್ಮಾರ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry