ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಜನಜೀವನ ಅಸ್ತವ್ಯಸ್ತ

7

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಜನಜೀವನ ಅಸ್ತವ್ಯಸ್ತ

Published:
Updated:

ರಾಯಚೂರು: ದೇವದುರ್ಗ ವರದಿ

ತಾಲ್ಲೂಕು ಬಿಜೆಪಿ ಶನಿವಾರ ಕರೆ ನೀಡಿದ ‘ಗವ ರ್ನರ್ ಹಠಾವೋ ಚಳುವಳಿ’ಗೆ ಮಿಶ್ರಪ್ರತಿಕ್ರಿಯೆ ಕಂಡು ಬಂದಿದ್ದು, ಪಕ್ಷದ ವತಿಯಿಂದ ಮುಖಂಡರು ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.ಶನಿವಾರ ಮಧ್ಯಾಹ್ನ ಪಕ್ಷದ ರಾಜ್ಯ ಕಾರ್ಯದರ್ಶಿ ಸುಜಾತ ಶಿವರಾಜ ಪಾಟೀಲ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ವಕೀಲ ವಿ.ಎಂ. ಮೇಟಿ, ಅಧ್ಯಕ್ಷ ಸಿ.ಎಸ್. ಪಾಟೀಲ ನೇತೃತ್ವದಲ್ಲಿ ತಹಸೀಲ್ದಾರರ ಕಚೇರಿಗೆ ಆಗಮಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು  ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಗುರುಲಿಂಗಪ್ಪ ಅವರಿಗೆ ನೀಡಿದರು.ಬಂದ್ ವಿಫಲ: ಬಿಜೆಪಿ ಕರೆ ನೀಡಿದ್ದ ಬಂದ್‌ಗೆ ತಾಲ್ಲೂಕಿನಲ್ಲಿ ವಿಫ ಲವಾಗಿರುವುದು ಕಂಡು ಬಂದಿತು. ವ್ಯಾಪಾರ ವಹಿವಾಟಗಳಲ್ಲಿ ಬದಲಾವಣೆ ಕಂಡು ಬರಲಿಲ್ಲ.

ತೊಂದರೆ: ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಸ್‌ಗಳನ್ನು ಶನಿವಾರ ಮುಂಜಾನೆಯಿಂದಲೇ ಸಂಚಾರ ಸ್ಥಗಿತಗೊಳಿಸಿದ ಕಾರಣ ಪ್ರಯಾಣಿಕರು ಸಂಜೆವರಿಗೂ ಬಸ್ ನಿಲ್ದಾಣದಲ್ಲಿ ಕಾಲಕಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ರಜೆ: ಸರ್ಕಾರಿ ಮತ್ತು ಖಾಸಗಿ ಶಾಲಾ, ಕಾಲೇಜುಗಳಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಜೆ ಘೋಷಣೆ ಮಾಡಲಾಗಿತ್ತು.ಪಕ್ಷದ ರಾಜ್ಯ ಕಾರ್ಯದರ್ಶಿ ಸುಜಾತ ಶಿವರಾಜ ಪಾಟೀಲ ಪ್ರತಿಭಟನೆಯಲ್ಲಿ ಮಾತನಾಡಿದರು. ದೇವಿಂದ್ರಪ್ಪ ಹಂಚಿನಾಳ, ದೊಡ್ಡಪ್ಪ ಹಂಚಿನಾಳ, ಪುರಸಭೆ ಸದಸ್ಯ ಜಿ. ಪಂಪಣ್ಣ, ಲಚಮಣ್ಣ ರಾಠೋಡ್, ಅಲೀಮ್ ಪಾಶಾ, ಜಕಣಪ್ಪ, ಚಂದ್ರಶೇಖರ ಹೇಮನೂರು, ವೆಂಕಟರೆಡ್ಡಿ ಕೊಪ್ಪರ, ಸಂಗಯ್ಯ ಸ್ವಾಮಿ ಗಬ್ಬೂರು, ಸಾಹೇಬಗೌಡ ಅಂಜಳ, ಲಿಂಗನಗೌಡ ದೊಂಡಂಬಳಿ, ಎ. ಬಸವರಾಜಪ್ಪ, ವಕೀಲರಾದ ಮಲ್ಲನಗೌಡ, ನರಸಪ್ಪ ಹಾಗೂ ಮತ್ತಿತರರು ಭಾಗವಹಿಸಿದ್ದರು.ಲಿಂಗಸುಗೂರ ವರದಿ

ರಾಜ್ಯ ಬಿಜೆಪಿ ಪಕ್ಷದ ವರಿಷ್ಠರು ರಾಜ್ಯಪಾಲ ಭಾರದ್ವಾಜ ಅವರ ರಾಜಕೀಯ ಪ್ರೇರಿತ ಆದೇಶ ವಿರೋಧಿಸಿ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿತ್ತು. ಶನಿವಾರ ಬೆಳಿಗ್ಗೆಯಿಂದಲೆ ಬಂದ್‌ಗೆ ಸ್ವಲ್ಪ ಮಟ್ಟಿನ ಪ್ರತಿಕ್ರಿಯೆ ಕಂಡುಬಂದಿತ್ತು. ಆದರೆ, ತಾಲ್ಲೂಕಿನ ಬಿಜೆಪಿ ಮುಖಂಡರ ಅಸಮಾಧಾನ, ಭಿನ್ನಾಭಿಪ್ರಾಯಗಳಿಂದ ಬಂದ್ ಸಂಪೂರ್ಣ ವಿಫಲಗೊಂಡಿರುವುದು ಕಂಡು ಬಂದಿತು.ಬೆಳಿಗ್ಗೆಯಿಂದಲೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣ ಮಾತ್ರ ಬಿಕೊ ಎನ್ನು ತ್ತಿತ್ತು. ಕೆಲ ಬಿಜೆಪಿ ಅಭಿಮಾನಿಗಳು ಅಂಗಡಿಗಳನ್ನು ಬಂದ್ ಮಾಡಿ ಕೊಂಡಿದ್ದರು. ಆದರೆ, ಪಕ್ಷದ ಮುಖಂಡರಾಗಲಿ, ಕಾರ್ಯಕರ್ತ ರಾಗಲಿ ಬಂದ್‌ಗೆ ಬೆಂಬಲಿಸುವ ಲಕ್ಷಣಗಳು ಕಾಣದೆ ಹೋದಾಗ ಎಲ್ಲಾ ಅಂಗಡಿಗಳು ಎಂದಿನಂತೆ ತೆರೆದುಕೊಂಡಿದ್ದವು.ಜನಜೀವನ, ವ್ಯಾಪಾರ ವಹಿ ವಾಟು, ಖಾಸಗಿ ವಾಹನಗಳ ತಿರುಗಾಟ ಎಂದಿನಂತೆ ಕಂಡು ಬಂದಿತು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಪ್ರಭಾರಿ ಮುಖಂಡರ ಆಂತರಿಕ ಭಿನ್ನಮತದ ಕರಿನೆರಳು ಕರ್ನಾಟಕ ಬಂದ್ ವೇಳೆ ಬಹಿರಂಗಗೊಂಡಿದ್ದು ಪೊಲೀಸ್ ಉಪ ವಿಭಾಗಾಧಿಕಾರಿ ಎಚ್.ಆಂಜನೇಯ ನೇತೃತ್ವದಲ್ಲಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಆರ್ ಶಿವಮೂರ್ತಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ದೀಪಕ್ ಭೂಸ ರೆಡ್ಡಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.ಮಾನ್ವಿ ವರದಿ

ಮುಖ್ಯಮಂತ್ರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಬಿಜೆಪಿ ತನ್ನ ವಿರೋಧ ವ್ಯಕ್ತಪಡಿಸಿದೆ.ಶನಿವಾರ ಬಿಜೆಪಿ ಕರೆ ನೀಡಿದ ಬಂದ್ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶೇಷರೆಡ್ಡಿ, ಮಲ್ಲನ ಗೌಡ ನಕ್ಕುಂದಿ, ತಿಮ್ಮಾರೆಡ್ಡಿ ಭೋಗಾ ವತಿ, ಕೃಪಾಸಾಗರ ಪಾಟೀಲ್, ವಸಂತ ಕೊಡ್ಲಿ, ಉಮೇಶ ಸಜ್ಜನ, ಬಿ.ಮಹಾಂತಪ್ಪಗೌಡ ಮತ್ತು ಜಿಪಂ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ ಭಾಗವಹಿಸಿದ್ದರು.ಕವಿತಾಳ ವರದಿ

ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಬಿಜೆಪಿ ಕಾರ್ಯ ಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗೂಗೆಬಾಳ, ಮಲ್ಲಪ್ಪ ಕವಿತಾಳ, ಭೀಮಸೇನಾಚಾರ್ಯ ರಾಜಪು ರೋಹಿತ್, ತಾಪಂ ಸದಸ್ಯರಾದ ಕರಿಯಪ್ಪ ಅಡ್ಡೆ, ಕರಿಯಪ್ಪ ತೋಳ, ಬಸವರಾಜಸ್ವಾಮಿ, ಅಮರಪ್ಪ ಕಂಬಾರ, ಅಯ್ಯಪ್ಪ, ಹನುಮಯ್ಯ, ಈರಣ್ಣ, ಶಿವಕುಮಾರ, ಯಾಕೂಬ್ ಮತ್ತು ವೆಂಕಪ್ಪ ಪೂಜಾರಿ  ಇದ್ದರು.ಹಟ್ಟಿ ಚಿನ್ನದ ಗಣಿ ವರದಿ

ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಚಾರದ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಬಿಜೆಪಿ ಪಕ್ಷವು ನೀಡಿದ ರಾಜ್ಯ ಬಂದ್ ಕರೆಗೆ ಹಟ್ಟಿಯಲ್ಲಿ ಶೂನ್ಯ ಪ್ರತಿಕ್ರಿಯೆ ಕಂಡುಬಂದಿತು.ವ್ಯಾಪರ, ವಹಿವಾಟು ಯಥಾಪ್ರಕಾರ ನಡೆಯಿತು. ಹಟ್ಟಿ ಚಿನ್ನದ ಗಣಿಯ ಕಾರ್ಮಿಕರು ಎಂದಿನಂತೆ ತಮ್ಮ ಕರ್ತ್ಯವ್ಯಗಳಿಗೆ ಹಾಜರಾದರು. ಜನಜೀವನ ಸಾಮಾನ್ಯ ಸ್ಥಿತಿಯಲ್ಲಿ ನಡೆಯಿತು.  ಆದರೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ರಾಜ್ಯ ಸಾರಿಗೆ ಬಸ್‌ಗಳ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಪರದಾಡಿದರು. ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕೆಂದು ಪ್ರಯಾಣಿಕರು ಗೋಳಿಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry