ಬಂದ್: ಶಾಲಾ ಕಾಲೇಜುಗಳಿಗೆ ಬೀಗ

7

ಬಂದ್: ಶಾಲಾ ಕಾಲೇಜುಗಳಿಗೆ ಬೀಗ

Published:
Updated:

ಬೆಂಗಳೂರು: ಕರ್ನಾಟಕ ಬಂದ್‌ನಿಂದಾಗಿ ನಗರದ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು. ಇದರಿಂದ ಶಾಲಾ-ಕಾಲೇಜುಗಳ ಪ್ರವೇಶ ದ್ವಾರಗಳಿಗೆ ಬೀಗ ಹಾಕಿದ್ದ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು.ಬಂದ್‌ನಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಶಾಲೆಗಳಲಿಗೆ ರಜೆ ನೀಡಿದ್ದರಿಂದ ಖಾಲಿಯಾಗಿದ್ದ ರಸ್ತೆಗಳನ್ನು ವಿದ್ಯಾರ್ಥಿಗಳು ಕ್ರಿಕೆಟ್ ಮೈದಾನವಾಗಿಸಿಕೊಂಡರು. ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದ ದೃಶ್ಯ ಕಂಡುಬಂತು.

`ಮಕ್ಕಳಿಗೆ ಶಾಲೆ ಇಲ್ಲ ಎಂದರೆ ಇವರನ್ನು ನಿಭಾಯಿಸುವುದೇ ದೊಡ್ಡ ತಲೆ ನೋವು. ಟಿವಿಯಲ್ಲಿ ಯಾವುದೇ ಮನರಂಜನಾ ಕಾರ್ಯಕ್ರಮಗಳಿಲ್ಲದೇ ಬೇಸರವಾಗುತ್ತಿದೆ. ಹೊರಗೆ ಹೋದರೆ ಗಲಾಟೆ ನಡೆಯುತ್ತದೆ ಎಂಬ ಭಯ. ಹೀಗಾಗಿ ಮಕ್ಕಳನ್ನು ಮನೆಯಲ್ಲೇ ಕೂಡಿಹಾಕುವುದು ಅನಿವಾರ್ಯವಾಗಿದೆ~

-ಶೈಲಜಾ, ಇಂದಿರಾನಗರದ ನಿವಾಸಿ

`ಮನೆಯಲ್ಲಿರಲು ಇಷ್ಟಪಡದ ಮಕ್ಕಳು ರಸ್ತೆಯಲ್ಲಿ ಆಟವಾಡಲು ಹೋಗುತ್ತೇವೆ ಎಂದು ಹಠ ಹಿಡಿಯುತ್ತಾರೆ. ರಸ್ತೆಯಲ್ಲಿ ಏನಾದರೂ ಗಲಾಟೆ ಆಗುತ್ತದೆಯೋ ಎಂಬ ಆತಂಕವಿದೆ. ಹೀಗಾಗಿ ಮಕ್ಕಳನ್ನು ಮನೆಯಿಂದ ಆಚೆಗೆ ಬಿಡಲಿಲ್ಲ~

-ಶಮಾ, ವಿಜಯನಗರದ ನಿವಾಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry