ಸೋಮವಾರ, ಅಕ್ಟೋಬರ್ 21, 2019
25 °C

ಬಂಧಮುಕ್ತ ವರ್ತಕರಿಗೆ ಚಿಕಿತ್ಸೆ

Published:
Updated:

ಬೀಜಿಂಗ್ (ಪಿಟಿಐ): ಯಿವು ವ್ಯಾಪಾರಿಗಳ ಅಕ್ರಮ ಬಂಧನದಲ್ಲಿದ್ದ ಭಾರತದ ಇಬ್ಬರು ವ್ಯಾಪಾರಿಗಳನ್ನು ಬಂಧಮುಕ್ತರನ್ನಾಗಿಸಿ ಶಾಂಘೈ ನಗರಕ್ಕೆ ಕರೆತಂದು ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.ಯಿವು ವ್ಯಾಪಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿರುವುದರಿಂದ ಮೈಮೇಲೆ ಅನೇಕ ಗಾಯಗಳಾಗಿದ್ದು, ನಾವು ಆಘಾತಕ್ಕೆ ಒಳಗಾಗಿದ್ದೇವೆ ಎಂದು ದೀಪಕ್ ರಹೇಜಾ ಅವರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಶಾಂಘೈಯಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯು ಈ ಇಬ್ಬರು ಭಾರತೀಯ ವ್ಯಾಪಾರಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಹೋಟೆಲ್‌ವೊಂದರಲ್ಲಿ ಉಳಿಯಲು ಈ ವ್ಯಾಪಾರಿಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಹೋಟೆಲ್ ಇರುವ ಸ್ಥಳ ಗೋಪ್ಯವಾಗಿಡಲಾಗಿದೆ.`ಸ್ಥಳಾಂತರ ಯತ್ನ~: ಮುಂಬೈನ ಇಬ್ಬರು ವರ್ತಕರನ್ನು ಭಾರತದ ರಾಜತಾಂತ್ರಿಕ ಅಧಿಕಾರಿ ಎಸ್.ಬಾಲಚಂದ್ರನ್ ಗೋಪ್ಯವಾಗಿ ಬೇರೆಡೆಗೆ ಸ್ಥಳಾಂತರಿಸಲು ಯತ್ನಿಸಿದ್ದರು ಎಂದು ಚೀನಾ ಸರ್ಕಾರದ ದಿನಪತ್ರಿಕೆಯೊಂದು ಆಪಾದಿಸಿದೆ.ಶಾಂಘೈನಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯ ಬಾಲಚಂದ್ರನ್ ಡಿ.31ರಂದು ನ್ಯಾಯಾಲಯದ ವಿಚಾರಣೆಯ ವಿರಾಮ ಅವಧಿಯಲ್ಲಿ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ತಮ್ಮ ರಾಷ್ಟ್ರದ ವರ್ತಕರನ್ನು ಸ್ಥಳಾಂತರಿಸಲು ಪ್ರಯತ್ನಿಸಿದ್ದರು ಎಂದು ಅದು ಆರೋಪಿಸಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)