ಬಂಧಮುಕ್ತ ‘ಜಾಕಿ’

7

ಬಂಧಮುಕ್ತ ‘ಜಾಕಿ’

Published:
Updated:

ಕೊನೆಗೂ ಚಿತ್ರತಂಡ ಹರಸಾಹಸ ಪಟ್ಟು ‘ಜಂಗಲ್‌ ಜಾಕಿ’ಯನ್ನು ಪೇಟೆಗೆ ಪರಿಚಯಿಸುವ ಕೆಲಸ ಮಾಡಿದೆ. ‘ಹಳ್ಳಿ ಹೈದ ಪ್ಯಾಟೆಗ್‌ ಬಂದ’ ರಿಯಾಲಿಟಿ ಶೋನ ರಾಜೇಶ ಮತ್ತು ಐಶ್ವರ್ಯಾ ಜೋಡಿಯ ‘ಜಂಗಲ್‌ ಜಾಕಿ’ ಸೆ. 20 ರಂದು ತೆರೆ ಕಾಣಲಿದೆ. ಸುದ್ದಿಗೋಷ್ಠಿಯಲ್ಲಿ ಇಡೀ ಚಿತ್ರ ತಂಡವೇ ಹಾಜರಿದ್ದರೂ ಜಂಗಲ್‌ ಜಾಕಿ ರಾಜೇಶ ಗೈರು ಹಾಜರಾಗಿದ್ದುದು ಎದ್ದು ಕಂಡಿತು.ತಮ್ಮ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರ ಬಹಳ ದಿನಗಳ ನಂತರವಾದರೂ ತೆರೆಕಾಣುತ್ತಿರುವ ಸಂತಸ ನಿರ್ದೇಶಕ ರವಿ ಕಡೂರು ಅವರದ್ದು. ರಾಜೇಶನಿಂದ ಕೆಲಸ ತೆಗೆದಿದ್ದು ಕಷ್ಟವಾಯಿತು. ಚಿತ್ರೀಕರಣಕ್ಕೆ ತೆಗೆದುಕೊಂಡ ಸಮಯ 34 ದಿನಗಳಷ್ಟೇ ಎಂದಷ್ಟೇ ಹೇಳಿ ಹೊಸ ತಂಡವನ್ನು ಪರಿಚಯಿಸುವಂತೆ ಚಿತ್ರತಂಡದ ಪರಿಚಯಕ್ಕೆ ಬಹುಪಾಲು ಸಮಯ ಮೀಸಲಿಟ್ಟರು. 

 

ಅನಿವಾರ್ಯ ಕಾರಣಗಳಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಯಿತು. ರಾಜೇಶ ಸುದ್ದಿಯಲ್ಲಿದ್ದ ಸಂದರ್ಭದಲ್ಲಿ ತೆರೆಕಂಡಿದ್ದರೆ ಉತ್ತಮವಿತ್ತು. ಚಿತ್ರತಂಡ ಒಗ್ಗೂಡಿ ಕೆಲಸ ಮಾಡಿದೆ ಎಂದವರು ಸಂಗೀತ ನಿರ್ದೇಶಕ ವಿ. ಮನೋಹರ್.ನಟಿ ಐಶ್ವರ್ಯಾಗೆ ಪ್ಯಾಟೆ ಮಂದಿ... ಶೋನಲ್ಲಿ ಸಿಕ್ಕ ಯಶಸ್ಸು ಈ ಚಿತ್ರದಲ್ಲೂ ಸಿಗುವ ಭರವಸೆ ಇದೆಯಂತೆ. ‘ಮೊದ ಮೊದಲು ರಾಜೇಶ ನಟಿಸುತ್ತಾನೆಯೇ ಎಂದು ಭಯಪಟ್ಟಿದ್ದೆ. ಅವನು  ನನ್ನ ಭಯವನ್ನು ದೂರಮಾಡುವಂತೆ ನಟಿಸಿದ’ ಎಂದು ತಮ್ಮ ಅಭಿನಯಕ್ಕಿಂತ ನಾಯಕನ ಅಭಿನಯವನ್ನು ಪ್ರಶಂಸಿಸಿದರು. ನಿರ್ಮಾಪಕರಾದ ಉಮೇಶ್‌ಗೌಡ, ಸಿಂಧೂರ್‌, ಚಿತ್ರಸಾಹಿತಿ ಶಿವಕುಮಾರಗೌಡ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry