ಬುಧವಾರ, ಏಪ್ರಿಲ್ 21, 2021
31 °C

ಬಂಪರ್ ಇಳುವರಿ ನಿರೀಕ್ಷೆಯಲ್ಲಿ ನೇಗಿಲಯೋಗಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಮುಂಗಾರು ಆಶಾದಾಯಕವಾಗಿದೆ. ಕಳೆದ 10 ವರ್ಷಗಳಲ್ಲಿಯೇ ಕಾಣದಂತಹ ಬೆಳೆಗಳು, ಹೊಲಗಳಲ್ಲಿ ಹುಲುಸಾಗಿ ಬೆಳೆದು ಬರಪೂರ ಫಸಲು ಹೊತ್ತು ಬಂಪರ್ ಇಳುವರಿಯ ನಿರೀಕ್ಷೆ ಹುಟ್ಟಿಸಿವೆ.ಮುಂಗಾರಿನ ಮಳೆಯಲ್ಲಿ ಮಿಂದೆದ್ದ ಮಿನಿ ಮಲೆನಾಡು ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ. ತಾಲ್ಲೂಕಿನಲ್ಲಿ ಸುದೈವಿಗಳಾದ ನೇಗಿಲಯೋಗಿಯ ನಿರೀಕ್ಷೆಗೆ ತಕ್ಕಂತೆ ವರುಣದೇವ ಕೃಪೆ ತೋರುತ್ತಿರುವುದರಿಂದ ಅನ್ನದಾತರು ಹರ್ಷದ ಹೊನಲಿನಲ್ಲಿ ತೇಲಾಡುತ್ತಿದ್ದಾರೆ.ಹೆಸರು, ಉದ್ದು, ಎಳ್ಳು ಬೆಳೆಗಳು ಹೂಕಾಯಿ ಕಚ್ಚುವ ಹಂತದಲ್ಲಿವೆ. ಹೈಬ್ರಿಡ್ ಜೋಳ, ತೊಗರಿ, ಹತ್ತಿ ಕಬ್ಬು ಬೆಳವಣಿಗೆ ಹಂತದಲ್ಲಿದ್ದು ಉತ್ತಮವಾಗಿವೆ.ರಾಜ್ಯದಲ್ಲಿ ವ್ಯಾಪಕ ಬರಗಾಲ ಆವರಿಸಿ ಮುಂಗಾರು ಮಳೆ ಎರಡು ತಿಂಗಳು ತಡವಾಗಿ ಭೂಮಿಗಿಳಿದರೆ, ಮಿನಿ ಮಲೆನಾಡಿನಲ್ಲಿ ಬರಪೂರ ಮಳೆಯಿಂದ ಭೂರಮೆ ಹಸನ್ಮುಖಿಯಾಗಿ ಕಂಗೊಳಿಸುತ್ತಿದ್ದಾಳೆ.ತಾಲ್ಲೂಕಿನ ಸುಲೇಪೇಟ, ಕೋಡ್ಲಿ, ರಟಕಲ್, ಐನಾಪೂರ, ಚೇಂಗಟಾ, ಚಂದನಕೇರಾ, ರಾಣಾಪೂರ, ಚಿಮ್ಮನಚೋಡ, ಸಲಗರ ಬಸಂತಪೂರ, ಹಸರಗುಂಡಗಿ, ತುಮಕುಂಟಾ, ನಾಗಾಈದಲಾಯಿ, ಶಾದಿಪೂರ, ಕೊಂಚಾವರಂ. ಐನೋಳ್ಳಿ, ದೇಗಲಮಡಿ, ಅಣವಾರ್, ಕರ್ಚಖೇಡ್, ಚತ್ರಸಾಲ್, ನಿಡಗುಂದಾ, ಗಡಿಕೇಶ್ವಾರ್, ಹಲಚೇರಾ, ಹೊಸಳ್ಳಿ, ಕನಕಪೂರ ಮುಂತಾದ ಕಡೆಗಳಲ್ಲಿ ಮುಂಗಾರು ಬೆಳೆಗಳು ಜಿಲ್ಲೆಯ ಬರ ಪೀಡಿತ ತಾಲ್ಲೂಕುಗಳ ರೈತರು ಹೊಟ್ಟೆಕಿಚ್ಚು ಪಡುವಂತೆ ಬೆಳೆದು ನಿಂತಿದ್ದು ಬಂಪರ್ ಇಳುವರಿ ಖಾತರಿ ಪಡಿಸುತ್ತಿವೆ.ಬೀದರ್ ಜಿಲ್ಲೆಯಲ್ಲೂ ಇದೇ ತರಹದ ಬೆಳೆ ಕಂಡು ಬಂದಿದ್ದು ನೋಡಿದರೆ ಇಡಿ ರಾಜ್ಯದ ಜನ ಬೀದರ್ ಮತ್ತು ಚಿಂಚೋಳಿ ರೈತರತ್ತ ಮುಖ ಮಾಡುವಂತೆ ಬೆಳೆಗಳು ರಾರಾಜಿಸುತ್ತಿವೆ. ಸಧ್ಯ ಮಳೆರಾಯ ಕೃಷಿಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾನೆ. ಮುಂದಿನ 2/3 ವಾರಗಳಲ್ಲಿಂದ ಶುರುವಾಗುವ ಅಲ್ಪಾವಧಿಯ ಹೆಸರು, ಉದ್ದು ಬೆಳೆಗಳ ರಾಶಿಯ ವೇಳೆಗೆ ಮಳೆ ಸ್ವಲ್ಪ ವಿರಾಮ ನೀಡಿದರೆ ಅನ್ನದಾತನ ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೆ.ಗುರಿಮೀರಿ ಬಿತ್ತನೆ: ಜಿಲ್ಲೆಯಲ್ಲಿಯೇ ಗುರಿ ಮೀರಿ ಬಿತ್ತನೆ ಈ ತಾಲ್ಲೂಕಿನಲ್ಲಿ ನಡೆದಿದ್ದು ಶೇ.101ರಷ್ಟು ಮುಂಗಾರು ಬಿತ್ತನೆ ಪೂರ್ಣಗೊಂಡಿದೆ. (ಆವರಣದಲ್ಲಿ ನಿಗದಿತ ಗುರಿ) ಅದರ ಮುಂದೆ ಬಿತ್ತೆಯಾದ ಕ್ಷೇತ್ರ ಹೆಕ್ಟೇರ್‌ಗಳಲ್ಲಿ ನೀಡಲಾಗಿದೆ. ಉದ್ದು -(9000) 9413. ಹೆಸರು -(4250) 4612. ತೊಗರಿ -(48600) 49149. ಹೈಬ್ರಿಡ್ ಜೋಳ -(600) 912 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ.ಸರಾಸರಿಗಿಂತ ಅಧಿಕ ಮಳೆ:
ರಾಜ್ಯದಲ್ಲಿ ಮಳೆಯ ಭಾರಿ ಕೊರತೆಯಾಗಿ ಜಲಾಶಯಗಳು ಬರೀದಾಗುತ್ತಿದ್ದರೆ, ತಾಲ್ಲೂಕಿನಲ್ಲಿ ಸರಾಸರಿಗಿಂತ ಅಧಿಕ ಮಳೆ ಸುರಿದು ಜಲಾಶಯ, ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ಗಮನ ಸೆಳೆಯುತ್ತಿವೆ. ಆವರಣದಲ್ಲಿ ಸರಾಸರಿ ಮಳೆ ಅದರ ಮುಂದೆ ಸುರಿದ ಮಳೆ ವಿವರ. ಮೇ -(17.5) 30.7, ಜೂನ್ -(147.9) 150.6, ಜುಲೈ-(207.4) 223.7 ಮಿ.ಮೀರ್ ಮಳೆ ಸುರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.