ಬಂಬೂ ಬಜಾರ್‌ಗೆ ಬೆಂಕಿ: 14 ಲಕ್ಷ ನಷ್ಟ

ಭಾನುವಾರ, ಜೂಲೈ 21, 2019
25 °C

ಬಂಬೂ ಬಜಾರ್‌ಗೆ ಬೆಂಕಿ: 14 ಲಕ್ಷ ನಷ್ಟ

Published:
Updated:

ಶಿರಾ: ನಗರದ ಬಂಬೂ ಬಜಾರ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಿದಿರು ಸುಟ್ಟು ಭಸ್ಮವಾಗಿದೆ.

ಆಕಸ್ಮಿಕ ಬೆಂಕಿ ಅನಾಹುತಕ್ಕೆ ಲಕ್ಷಾಂತರ ಬೆಲೆಯ ಬಿದಿರು, ಸರ್ವೆ ಮರ ಸೇರಿದಂತೆ ಅಗತ್ಯ ವಸ್ತುಗಳು ಸುಟ್ಟು ಹೋಗಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.ಬಜಾರಿನ ಅಂಗಡಿಯೊಂದರಲ್ಲಿ ನಡೆದ ವಿದ್ಯುತ್‌ಶಾರ್ಟ್ ಸರ್ಕೀಟ್‌ನಿಂದ ಕಿಡಿ ಹೊತ್ತಿ 6 ಗೋದಾಮು ಸುಟ್ಟಿವೆ. ಬಿದಿರಿನಿಂದ ಮಾಡಿದ ಏಣಿ ಇತರೆ ಪರಿಕರ ಸೇರಿದಂತೆ ಒಟ್ಟು 14 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.ಬಜಾರಿನ ಈರಣ್ಣ, ನಾಗರಾಜು, ಸರಸ್ವತಮ್ಮ, ಈಶ್ವರಪ್ಪ, ಹನುಮಂತಪ್ಪ ಎನ್ನುವರಿಗೆ ಸೇರಿದ ಡಿಪೋದಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ವಸ್ತು ಭಸ್ಮವಾಗಿವೆ ಎನ್ನಲಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಕುಲಕರ್ಣಿ, ಪೌರಾಯುಕ್ತ ಬಿ.ಟಿ.ರಂಗಸ್ವಾಮಿ, ನಗರಸಭೆ ಸದಸ್ಯರು ಸೇರಿದಂತೆ ಹಲವರು ಭೇಟಿ ನೀಡಿದ್ದರು.ಯಂತ್ರ ದೋಷ: ಬೆಂಕಿ ಬಿದ್ದ ಕೂಡಲೇ ನಗರ ಅಗ್ನಿಶಾಮಕದಳಕ್ಕೆ ಸುದ್ದಿ ತಿಳಿಸಿದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದ್ದು, ಅಗ್ನಿಶಾಮಕ ವಾಹನದ ನೀರೆತ್ತುವ ಮೋಟರ್ ಕಾರ್ಯ ನಿರ್ವಹಿಸದೆ ಬೆಂಕಿಯನ್ನು ಆರಂಭದಲ್ಲೇ ನಂದಿಸಲು ಆಗದೆ ಜನರ ಆಕ್ರೋಶಕ್ಕೆ ಅಗ್ನಿಶಾಮಕ ಸಿಬ್ಬಂದಿ ತುತ್ತಾಗಬೇಕಾಯಿತು ಎಂದು ತಿಳಿದು ಬಂದಿದೆ.ತಕ್ಷಣ ಮತ್ತೊಂದು ವಾಹನ ಕರೆಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಲಾಯಿತಾದರೂ ವಾಹನದಲ್ಲಿನ ನೀರಿನ ದಾಸ್ತಾನು ಮುಗಿದು ತುಂಬಿಸಿಕೊಂಡು ಬರಲು ತೆರಳಿತು. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry