ಬಗರ್‌ಹುಕುಂ ಅರ್ಜಿ ವಿಲೇವಾರಿ ಲೋಪ

7

ಬಗರ್‌ಹುಕುಂ ಅರ್ಜಿ ವಿಲೇವಾರಿ ಲೋಪ

Published:
Updated:

ರಿಪ್ಪನ್‌ಪೇಟೆ: ಬುಡಕಟ್ಟು ಅರಣ್ಯವಾಸಿಗಳಿಗೆ ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಸೂಕ್ತಸ್ಥಾನ ಮಾನಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಯ ಅಡಿ ಮೂಲ ದಾಖಲಾತಿಗಳನ್ನು ಸಂಗ್ರಹಣೆ ಮಾಡಿದ ಗ್ರಾಮ ಅರಣ್ಯ ಸಮಿತಿ ಶಿಫಾರಸಿನ ಪತ್ರ ಸಕಾಲದಲ್ಲಿ ಗ್ರಾಮ ಪಂಚಾಯ್ತಿಯು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸದೇ ಲೋಪ ಎಸಗಿದೆ ಎಂದು ಆರೋಪಿಸಿ ಮಸ್ಕಾನಿ ಭಾಗದ ರೈತರು ಬೆಳ್ಳೂರು ಗ್ರಾಮ ಪಂಚಾಯ್ತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬು  ಮಾತನಾಡಿ, ತಲೆತಲಾಂತರದಿಂದ ವಾಸವಾಗಿರುವ ಜನರ ಅರ್ಜಿ ವಿಲೇವಾರಿ ಹಾಗೂ ಅಗತ್ಯ ದಾಖಲೆಗಳನ್ನು ಕ್ರೋಡೀಕರಿಸಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುವಲ್ಲಿ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ಧೋರಣೆ ತಾಳಿರುವುದು ಸರಿಯಲ್ಲ ಎಂದು ದೂರಿದರು.ಆರ್.ಎನ್. ಮಂಜುನಾಥ, ಡಿ.ಎಸ್. ರಾಜೇಶ್, ಎಸ್.ಎಂ. ಮುಸ್ತಫ್, ಮಸ್ಕಾನಿ ಶೇಷನಾಯ್ಕ, ಎಂ.ಎಚ್. ಸತೀಶ್, ದೇವೇಂದ್ರ,  ವೆಂಕಪ್ಪ,  ಹಾಲಪ್ಪ, ಸಿ.ಬಿ. ಮಂಜಪ್ಪ, ದಿವಾಕರ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry