ಬಗೆಹರಿಯದ ಪರವಾನಗಿ ಸಮಸ್ಯೆ

7

ಬಗೆಹರಿಯದ ಪರವಾನಗಿ ಸಮಸ್ಯೆ

Published:
Updated:

ಚಿಂತಾಮಣಿ: ಬಸ್ ಸಂಚಾರ ಪರವಾನಗಿ ವಿಷಯವಾಗಿ ಪಟ್ಟಣದಲ್ಲಿ ಬುಧವಾರ ನಡೆದ ಪ್ರಾದೇಶಿಕ ಇಲಾಖೆ ಅಧಿಕಾರಿಗಳ ಹಾಗೂ ಬಸ್ ಮಾಲೀಕರ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗಲಿಲ್ಲ. ಇದರ ಪರಿಣಾಮ ಜಟಾಪಟಿ ಹಾಗೇ ಮುಂದುವರೆದಿದೆ.ಇದೇ ವೇಳೆ ಎಸ್‌ಆರ್‌ಎಸ್ ಮತ್ತು ಅನ್ನಪೂರ್ಣೇಶ್ವರಿ ಬಸ್ ಮಾಲೀಕರ ನಡುವಿನ ಕಲಹ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಉದ್ರಿಕ್ತ ವಾತಾವರಣ ಉಂಟಾಯಿತು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಲು ಯತ್ನಿಸಿ ವಿಫಲವಾದರು.ಬುಧವಾರ ಬೆಳಿಗ್ಗೆ ಬಸ್ ಮಾಲೀಕರ ನಡುವಿನ ಜಗಳ ವಿಕೋ ಪಕ್ಕೆ ತಿರುಗಿತ್ತು. ಖಾಸಗಿ ಬಸ್‌ಗಳು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವುದಾಗಿ ಪರವಾನಗಿ ಪಡೆದು ಮುಖ್ಯ ರಸ್ತೆ ಯಲ್ಲಿ ಸಂಚರಿಸುತ್ತಿದ್ದರೂ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ಕೆಲವು ಖಾಸಗಿ ಬಸ್‌ಗಳ ಮಾಲೀ ಕರೇ ಪರವಾನಗಿ ಹೊಂದಿರುವ ಮಾರ್ಗದಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.ಮುಖ್ಯ ರಸ್ತೆಯಲ್ಲಿ ಸಂಚಾರದಿಂದ ಸರ್ಕಾರಿ ಬಸ್‌ಗಳ ಆದಾಯಕ್ಕೆ ಪೆಟ್ಟು ಬೀಳುತ್ತದೆ.

ಅದೇ ರೀತಿ ವಾಹನ ದಟ್ಟಣೆ ಕೂಡಾ ಹೆಚ್ಚಾಗುತ್ತದೆ. ಬಸ್ ಮಾಲೀಕರ ನಡುವಿನ ಕಿತ್ತಾಟದಿಂದ ಪ್ರಯಾಣಿಕರು ಸಂಕಷ್ಟ ಅನುಭವಿ ಸಬೇಕಾಗಿದೆ ಎನ್ನುವುದು ಸ್ಥಳೀಯರ ದೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry