ಬುಧವಾರ, ನವೆಂಬರ್ 13, 2019
21 °C

ಬಗೆ ಬಗೆ ಬೇಸಿಗೆ ಶಿಬಿರ

Published:
Updated:

ಸಾಂಸ್ಕೃತಿಕ ಶಿಬಿರ

ರಂಗಾಭರಣ ಕಲಾಕೇಂದ್ರವು ಏ.15ರಿಂದ ಮೇ.15ರವರೆಗೆ ಒಂದು ತಿಂಗಳ ಬೇಸಿಗೆ ಸಾಂಸ್ಕೃತಿಕ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಚಿತ್ರಕಲೆ, ಕ್ರಾಫ್ಟ್, ಪಾಟ್, ಗಾಜು ಪೇಂಟಿಂಗ್, ಚಲನಚಿತ್ರ ಗೀತೆಗಳಿಗೆ ನೃತ್ಯ ಹಾಗೂ ಭಕ್ತಿಗೀತೆಗಳ ಗಾಯನ ಜೊತೆಗೆ ಗಿಟಾರ್ ಅಥವಾ ಕೀಬೋರ್ಡ್ ನುಡಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ.

ಸ್ಥಳ: ಚಂದ್ರಪ್ರಿಯಾ ರಂಗಮಂದಿರ, ಕೆ.ಇ.ಬಿ. ಬಡಾವಣೆ, ಸಂಜಯ ನಗರ. ಪ್ರವೇಶ ಹಾಗೂ ಮಾಹಿತಿಗೆ: 90193 09090, 84532 68938.ಸಂಕಲ್ಪ ಸೇವಾ ಸಂಸ್ಥೆಯಲ್ಲಿ...

ಬಸವನಗುಡಿ ಸಂಕಲ್ಪ ಸೇವಾ ಸಂಸ್ಥೆಯು ಏ.15ರಿಂದ ಏ.27ರವರೆಗೆ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ಆಯೋಜಿಸಿದೆ. ಸಂಗೀತ, ನೃತ್ಯ, ಚಿತ್ರಕಲೆ ಕುರಿತು ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಶಿಬಿರ ಇರುತ್ತದೆ.

ಸ್ಥಳ: ಬಿ.ಬಿ.ಎಂ.ಪಿ. ಹೊಲಿಗೆ ತರಬೇತಿ ಕೇಂದ್ರ, ವಿದ್ಯಾಪೀಠ ವೃತ್ತದ ಸಮೀಪ ಹಾಗೂ ಶ್ರೀನಗರ ವೆಂಕಟರಮಣಸ್ವಾಮಿ ದೇವಸ್ಥಾನ. ಮಾಹಿತಿಗೆ: 98863 24278, 94804 66535.ಯೋಗ ಚಿಕಿತ್ಸೆ

ಶ್ರೀ ಮಂಜುನಾಥೇಶ್ವರ ಯೋಗ ಶಾಲೆಯು ಅಸ್ತಮಾ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಬೆನ್ನುನೋವು, ತಲೆನೋವು, ಹೃದ್ರೋಗ ಹಾಗೂ ಕೀಲು ತೊಂದರೆಯುಳ್ಳವರಿಗೆ ಯೋಗದ ಮೂಲಕ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಯೋಗ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಈಗಾಗಲೇ ಶಿಬಿರ ಆರಂಭವಾಗಿದ್ದು ಏ.30ರವರೆಗೆ ಬೆಳಿಗ್ಗೆ 6ರಿಂದ 7.15 ಹಾಗೂ ಸಂಜೆ 6ರಿಂದ 7.15ರವರೆಗೆ  ನಡೆಯಲಿದೆ. ಸ್ಥಳ: `ಗೌರ ಸದನ ಆವರಣ', ನಂ.7, 7ನೇ ಅಡ್ಡರಸ್ತೆ, ಜ್ಞಾನಜ್ಯೋತಿ ನಗರ, ಉಲ್ಲಾಳು ಮುಖ್ಯರಸ್ತೆ. ಮಾಹಿತಿಗೆ: 98444 55768, 99648 20559.ಜ್ಞಾನವಿಕಾಸ ಶಿಬಿರ

ಉದಯಭಾನು ಕಲಾ ಸಂಘವು ಭಾನುವಾರದಿಂದ ಮಂಗಳವಾರದವರೆಗೆ (ಏ.14ರಿಂದ ಏ.30) ಮಕ್ಕಳಿಗಾಗಿ `ಚೈತ್ರದ ಚಿಗುರು' ಜ್ಞಾನ ವಿಕಾಸ ಶಿಬಿರ ಆಯೋಜಿಸಿದೆ. ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸುವ ಉದ್ದೇಶದಿಂದ ಗಾಯನ, ಭಗವದ್ಗೀತೆ, ಯೋಗ, ಕೈಬರಹ, ಚಿತ್ರಕಲೆ, ಯಕ್ಷಗಾನ ಹಾಗೂ ಕಂಪ್ಯೂಟರ್ ಪರಿಚಯ ಸೇರಿದಂತೆ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನೂ ಹಮ್ಮಿಕೊಂಡಿದೆ.

ಸ್ಥಳ: ಕಲಾ ಸಂಘದ ಸಾಂಸ್ಕೃತಿಕ ಭವನ, ಕೆಂಪೇಗೌಡ ನಗರ. ಮಾಹಿತಿಗೆ: 2660 9343.ಗಾಯಕರಿಗೆ ಆಹ್ವಾನ

ಭಕ್ತಿಗೀತೆಗಳ ಸೀಡಿ ಹೊರತರಲು ತಯಾರಿ ನಡೆಸಿರುವ ಸುಸ್ವರ ಕಲಾವೃಂದವು ಈ ಸೀಡಿಯಲ್ಲಿ ಹಾಡಲು ಯುವ ಗಾಯಕ, ಗಾಯಕಿಯರನ್ನು ಆಹ್ವಾನಿಸಿದೆ.

ಇಪ್ಪತ್ತು ವರ್ಷ ಮೇಲ್ಪಟ್ಟ ಗಾಯಕ/ಗಾಯಕಿಯರು ಹಾಡಲು ಅರ್ಹರಾಗಿರುತ್ತಾರೆ ಎಂದು ಕಲಾವೃಂದ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳ: ನಂ.1428, ವಲ್ಮೀಕ, 5ನೇ ಬಡಾವಣೆ, ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ. ಮಾಹಿತಿಗೆ: 90606 22344.ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ...

ಭಾರತೀಯ ಸಂಸ್ಕೃತಿ ವಿದ್ಯಾಪೀಠವು ಏ.15ರಿಂದ ಮೇ. 15ರವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ. ಭಗವದ್ಗೀತೆ ಮತ್ತು ಸ್ತೋತ್ರಗಳು, ಚಿತ್ರಕಲೆ, ಸಂಗೀತ, ಏರೋಬಿಕ್ಸ್,ಯೋಗಾಸನ ಹೇಳಿಕೊಡಲಾಗುತ್ತದೆ.

ಸ್ಥಳ: ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಚಾಮರಾಜಪೇಟೆ. ಮಾಹಿತಿಗೆ: 2650 9169.ಉಚಿತ ಯೋಗ ಶಿಬಿರ

ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರವು ಏ.14ರವರೆಗೆ ಬೆಳಿಗ್ಗೆ 6ರಿಂದ 7ರವರೆಗೆ ಉಚಿತ ಯೋಗ ಶಿಬಿರ ಆಯೋಜಿಸಿದೆ. 15 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಬಸವನಪುರ ರಸ್ತೆ, ದೇವಸಂದ್ರ, ಕೆ.ಆರ್.ಪುರ. ಮಾಹಿತಿಗೆ: 2561 8300.ಯೋಗ ತರಬೇತಿ

ಸ್ವಾಮಿ ವಿವೇಕಾನಂದ ಯೋಗ ಕೇಂದ್ರವು ಮೂರು ತಿಂಗಳ ಅವಧಿಯ ಯೋಗಾಸನ ಹಾಗೂ ಪ್ರಾಣಾಯಾಮ ತರಗತಿಗಳನ್ನು ಆಯೋಜಿಸಿದೆ.

ಬೆಳಿಗ್ಗೆ 6ರಿಂದ 7ರವರೆಗೆ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಎಂಎಲ್‌ಎ ಕಾಲೇಜಿನಲ್ಲಿ ಶಿಬಿರ ನಡೆಸುತ್ತಿದೆ. ಮಾಹಿತಿಗೆ: 90361 41024.ಕೆಂಗೇರಿಯಲ್ಲಿ...

ಪರಬ್ರಹ್ಮ ವೇಗಗಣಿತ ಇನ್‌ಸ್ಟಿಟ್ಯೂಟ್ ಕೆಂಗೇರಿ ಉಪನಗರದಲ್ಲಿ ಏ.12ರಿಂದ ಏ.30ರವರೆಗೆ ಹಾಗೂ ಮೇ.1ರಿಂದ ಮೇ.20ರವರೆಗೆ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದೆ.

`ವೇದಿಕ್ ಮ್ಯಾತ್ಸ್', ರಸಪ್ರಶ್ನೆ, ನಾಟಕ, ಚಿತ್ರಕಲೆ, ಪೇಪರ್ ಕ್ರಾಫ್ಟ್, ಮಣ್ಣಿನ ಕಲಾಕೃತಿ, ಯೋಗ, ಧ್ಯಾನ, ನಾಯಕತ್ವ, ಭಾಷಣ ಕೌಶಲ, ಕೈ ಬರವಣೆಗೆ ಹಾಗೂ ಸ್ಪೋಕನ್ ಇಂಗ್ಲಿಷ್, ಜನಪದ ಮತ್ತು ವೇದಿಕ್ ಆಟಗಳನ್ನು ಹೇಳಿಕೊಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಸರು ನೋಂದಾಯಿಸಲು ಹಾಗೂ ಮಾಹಿತಿಗೆ ಸಂಪರ್ಕಿಸಿ: 99804 60711, 99641 26753.

ಪ್ರತಿಕ್ರಿಯಿಸಿ (+)