ಬಚ್ಚನ್ ಮೊಮ್ಮಗಳ ಹೆಸರು ಆರಾಧ್ಯಾ...!

7

ಬಚ್ಚನ್ ಮೊಮ್ಮಗಳ ಹೆಸರು ಆರಾಧ್ಯಾ...!

Published:
Updated:

ಮುಂಬೈ (ಐಎಎನ್‌ಎಸ್): ನನ್ನ ಮುದ್ದು ಮೊಮ್ಮಗಳ ಹೆಸರು ಆರಾಧ್ಯಾ !- ಹೀಗೆ ಟ್ವಿಟ್ಟರ್‌ನಲ್ಲಿ ತಮ್ಮ ಮೊಮ್ಮಗಳ ಹೆಸರನ್ನು ಪ್ರಕಟಿಸಿದವರು ಬಾಲಿವುಡ್ ಬಿಗ್ `ಬಿ~ ಅಮಿತಾಭ್ ಬಚ್ಚನ್.ಆರು ತಿಂಗಳಿನಿಂದ ಮೊಮ್ಮಗಳ ಹೆಸರಿನ ಬಗ್ಗೆ ಕುತೂಹಲ ಮೂಡಿಸಿಕೊಂಡಿದ್ದ ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಟ್ವಿಟ್ಟರ್ ಮೂಲಕ  ಉತ್ತರಿಸಿದ್ದಾರೆ.ನವೆಂಬರ್ 16ರಂದು ಬಾಲಿವುಡ್ ಬೆಡಗಿ ಐಶ್ವರ್ಯ ರೈ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಂದಿನಿಂದ ಬಚ್ಚನ್ ಕುಟುಂಬದ ಅಭಿಮಾನಿಗಳು ಮಗುವಿನ ಹೆಸರೇನಿಡಬಹುದೆಂದು ಕಾತರದಿಂದ ಕಾಯುತ್ತಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry