ಬಚ್ಚಿಟ್ಟ ಆಸ್ತಿ ಮೌಲ್ಯ

7

ಬಚ್ಚಿಟ್ಟ ಆಸ್ತಿ ಮೌಲ್ಯ

Published:
Updated:

ಪಣಜಿ (ಐಎಎನ್‌ಎಸ್): ಸಲ್ಮಾನ್ ಖುರ್ಷಿದ್ ಗೋವಾದಲ್ಲಿ ಖರೀದಿಸಿರುವ ಆಸ್ತಿಗಳ ನಿಜವಾದ ಮೌಲ್ಯವನ್ನು ಬಚ್ಚಿಟ್ಟು ತಪ್ಪು ಮಾಹಿತಿ ನಮೂದಿಸಿದ್ದಾರೆ ಎಂದು `ಭ್ರಷ್ಟಾಚಾರ ವಿರುದ್ಧ ಭಾರತ ಆಂದೋಲನ~ದ  ಗೋವಾ ಸಂಚಾಲಕ ವಾಲ್ಮೀಕಿ ನಾಯ್ಕ ಆಪಾದಿಸಿದ್ದಾರೆ.ಗೋವಾ ಭೂ ವ್ಯವಹಾರ ಮಾರುಕಟ್ಟೆಯಲ್ಲಿ ಅತಿ ಬೇಡಿಕೆಯ ಸ್ಥಳವಾದ ಕಲಂಗುಟ್ ಎಂಬಲ್ಲಿ 110ಗಿ102 ಚದುರ ಮೀಟರ್ ವಿಸ್ತೀರ್ಣದ ಅಪಾರ್ಟ್‌ಮೆಂಟ್‌ನ್ನು ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದಾರೆ.  ಈ ಆಸ್ತಿಗಳ ಮೌಲ್ಯ  ಕ್ರಮವಾಗಿ  ರೂ. 4,29,200 ಮತ್ತು ರೂ.3,94,400 ಎಂದು ಖುರ್ಷಿದ್ ಸರ್ಕಾರಕ್ಕೆ ತಿಳಿಸಿದ್ದು, ಈ ವಿವರಗಳು ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಇವೆ. ಈ ಆಸ್ತಿಯನ್ನು ಮಾವ ತಮ್ಮ ಮಗಳಿಗಾಗಿ ಖರೀದಿಸಿದ್ದಾರೆ ಎಂದು ಖುರ್ಷಿದ್ ಹೇಳಿಕೊಂಡಿದ್ದಾರೆ. ಆದರೆ ಆಸ್ತಿಯ ನಿಜವಾದ ಮೌಲ್ಯ ಅವರು ತೋರಿಸಿರುವುದಕ್ಕಿಂತ ತುಂಬಾ ಹೆಚ್ಚಿದೆ ಎಂದು ಕೇಜ್ರಿವಾಲ್ ನಿಕಟವರ್ತಿ ನಾಯ್ಕ ತಿಳಿಸಿದ್ದಾರೆ. ಕಲಂಗುಟ್‌ನಲ್ಲಿರುವ ಖುರ್ಷಿದ್ ಆಸ್ತಿಯ ದೃಶ್ಯವನ್ನು ಅವರು ಯುಟ್ಯೂಬ್ ವಿಡಿಯೋ ನೆಟ್‌ವರ್ಕ್‌ನಲ್ಲಿ ಪ್ರಕಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry