ಬಜಾಜ್ ಆಟೊ: ಲಾಭ ರೂ.740 ಕೋಟಿ

7

ಬಜಾಜ್ ಆಟೊ: ಲಾಭ ರೂ.740 ಕೋಟಿ

Published:
Updated:

ನವದೆಹಲಿ (ಪಿಟಿಐ): ದೇಶದ ಎರಡನೆಯ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಬಜಾಜ್ ಆಟೊ ಲಿಮಿಟೆಡ್ (ಬಿಎಎಲ್) ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ರೂ.740.67 ಕೋಟಿ ನಿವ್ವಳ ಲಾಭ ಗಳಿಸಿದೆ.ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ (ರೂ.725.80 ಕೋಟಿ) ನಿವ್ವಳ ಲಾಭ ಶೇ 2.05ರಷ್ಟು ಹೆಚ್ಚಿದೆ. ಆದರೆ, ಒಟ್ಟು ವರಮಾನ ಶೇ 4.11ರಷ್ಟು ಕುಸಿದಿದ್ದು, ರೂ.4,972 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರೂ.5,185.36 ಕೋಟಿ ವರಮಾನ ದಾಖಲಾಗಿತ್ತು.ಹಣದುಬ್ಬರ ಹೆಚ್ಚಳ, ಗರಿಷ್ಠ ಬಡ್ಡಿ ದರ, ರೂಪಾಯಿ ಅಪಮೌಲ್ಯ ಇತ್ಯಾದಿ ಸಂಗತಿಗಳಿಂದ ಮಾರಾಟದಲ್ಲಿ ಕುಸಿತವಾಗಿರುವುದೇ ನಿವ್ವಳ ಲಾಭದ ಪ್ರಮಾಣ ತಗ್ಗಲು ಪ್ರಮುಖ ಕಾರಣ ಎಂದು ಕಂಪೆನಿ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry