ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಪ್ರಥಮ

7

ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಪ್ರಥಮ

Published:
Updated:

ಬೆಂಗಳೂರು: `ಸೆಪ್ಟೆಂಬರ್‌ನಲ್ಲಿ 1,22,968 ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಮಾರಾಟವಾಗುವ ಮೂಲಕ  ಮೋಟಾರ್ ಬೈಕ್ ವಿಭಾಗದಲ್ಲಿ 1ನೇ ಸ್ಥಾನಕ್ಕೇರಿದೆ. ಇದೇ ವೇಳೆ ಸ್ಪ್ಲೆಂಡರ್ ಬ್ರಾಂಡ್‌ನ 1,21,018 ಮೋಟಾರ್ ಬೈಕ್ ಮಾರಾಟವಾಗಿವೆ~ ಎಂದು ಬಜಾಜ್ ಆಟೊ ಕಂಪೆನಿ ತಿಳಿಸಿದೆ.`ಡಿಸ್ಕವರ್ ಬೈಕ್ ತಂತ್ರಜ್ಞಾನ ಮತ್ತು ಮಾರುಕಟ್ಟೆ ಎರಡರಲ್ಲಿಯೂ ಯಶಸ್ಸು ಗಳಿಸಿದೆ~ ಎಂದು `ಬಜಾಜ್ ಆಟೊ~ ಮೋಟಾರ್ ಸೈಕಲ್ ಬಿಜಿನೆಸ್ ವಿಭಾಗದ ಅಧ್ಯಕ್ಷ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಸ್ತುತ ಬಜಾಜ್ ಆಟೊ, ಡಿಸ್ಕವರ್ ಬ್ರಾಂಡ್‌ನಲ್ಲಿ ನಾಲ್ಕು ಮಾದರಿ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಈ ವರ್ಷಾಂತ್ಯದಲ್ಲಿ 100ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry