ಭಾನುವಾರ, ಜನವರಿ 19, 2020
27 °C

ಬಜಾಜ್: ಹೊಸ ಸ್ಪೋರ್ಟ್ಸ್ ಬೈಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಎರಡನೇಯ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಬಜಾಜ್ ಆಟೊ ಮಂಗಳವಾರ ಇಲ್ಲಿ ಆಸ್ಟ್ರಿಯಾ ಮೂಲದ ಪಾಲುದಾರಿಕಾ ಕಂಪೆನಿ `ಕೆಟಿಎಂ~ ಸಹಭಾಗಿತ್ವದಲ್ಲಿ ಹೊಸ ಸ್ಪೋರ್ಟ್ಸ್ ಬೈಕ್ `ಡ್ಯೂಕ್ 200~ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ಬೈಕ್ ದೆಹಲಿ ಎಕ್ಸ್‌ಷೋರೂಂ ಬೆಲೆ ರೂ 1.8 ಲಕ್ಷದಷ್ಟಿದೆ.  `ಡ್ಯೂಕ್~ ದೇಶದಾದ್ಯಂತ ಇರುವ 32 `ಕೆಟಿಎಂ~ ಮಳಿಗೆಗಳಲ್ಲಿ ಲಭ್ಯವಿದೆ. ಪ್ರತಿ ವರ್ಷ ಒಂದರಂತೆ `ಕೆಟಿಎಂ~ನ ಹೊಸ ಬೈಕ್ ಅನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಬಜಾಜ್ ಆಟೊ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದಾರೆ.  ಬಜಾಜ್ ಮತ್ತು `ಕೆಟಿಎಂ~ ಜಂಟಿ ಪಾಲುದಾರಿಕೆಯಲ್ಲಿ 125ಸಿಸಿ ಡ್ಯೂಕ್ ಬೈಕ್ ಅನ್ನು ಈಗಾಗಲೇ ಯೂರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)