ಬಜಾರಪ್ಪ, ಈರಣ್ಣ, ನರಸಪ್ಪ ಮಡಿಲಿಗೆ ಪ್ರಥಮ ಸ್ಥಾನ

ಮಂಗಳವಾರ, ಜೂಲೈ 23, 2019
24 °C
ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ವಿವಿಧ ಸ್ಪರ್ಧೆ

ಬಜಾರಪ್ಪ, ಈರಣ್ಣ, ನರಸಪ್ಪ ಮಡಿಲಿಗೆ ಪ್ರಥಮ ಸ್ಥಾನ

Published:
Updated:

ರಾಯಚೂರು: ಇಲ್ಲಿನ ರಾಜೇಂದ್ರ ಗಂಜ್ ಆವರಣದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಮಂಗಳವಾರ ರಾಜೇಂದ್ರ ಗಂಜ್ ಹಮಾಲರ, ರೈಸ್‌ಮಿಲ್ ಹಾಗೂ ಕೈಗಾರಿಕಾ ಪ್ರದೇಶ ಹಮಾಲರ ಹಾಗೂ ಗಂಜ್ ಕಸಗೂಡಿಸುವ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ 110ಕೆಜಿ ಉಸುಕಿನ ಚೀಲ ಹೊತ್ತು ನಡೆದಾಡುವ ಹಾಗೂ ಗಂಜ್ ಕಸಗೂಡಿಸುವ ಮಹಿಳೆಯರಿಗಾಗಿ  ಎರಡೂ ಕೈಯಲ್ಲಿ 10-10ಕೆಜಿ ಭಾರದ ಕಲ್ಲು ಹೊತ್ತು ನಡೆದಾಡುವ ಸ್ಪರ್ಧೆ ನಡೆಯಿತು.ಗಂಜ್ ಹಮಾಲರ  ವಿಭಾಗ: ಬಜಾರಪ್ಪತಿಮ್ಮಪ್ಪ ಅವರು110ಕೆಜಿ ಉಸುಕಿನ(ಮರಳು)ಚೀಲವನ್ನು10 ನಿಮಿಷಗಳಲ್ಲಿ 3,304 ಅಡಿ ಹೊತ್ತು ಪ್ರಥಮ ಬಹುಮಾನ ಅರ್ಧ ತೊಲ ಚಿನ್ನದ ಉಂಗುರ ಪಡೆದುಕೊಂಡರು. ಮೊರ‌್ರಿರವಿ ರಾಮರೆಡ್ಡಿ ಅವರು10 ನಿಮಿಷಗಳಲ್ಲಿ 2,971ಅಡಿ ಹೊತ್ತು ದ್ವಿತೀಯ ಬಹುಮಾನ 5ತೊಲ ಬೆಳ್ಳಿ ಕಡಗ ಪಡೆದುಕೊಂಡರು. ನರಸಿಂಹಲು ಕರೆಯಪ್ಪ ಅವರು 10 ನಿಮಿಷಗಳಲ್ಲಿ 2,694ಅಡಿ ಹೊತ್ತು ತೃತೀಯ ಬಹುಮಾನ 3ತೊಲ ಬೆಳ್ಳಿ ಕಡಗ ಪಡೆದುಕೊಂಡರು. ಬ್ಯಾಗಾರ ನರಸಿಂಹಲು ಲಚಮಪ್ಪ ಅವರು 10 ನಿಮಿಷಗಳಲ್ಲಿ 2,011 ಅಡಿ ಹೊತ್ತು ನಾಲ್ಕನೇ ಬಹುಮಾನ 2ತೊಲ ಬೆಳ್ಳಿ ಕಡಗ ತಮ್ಮದಾಗಿಸಿಕೊಂಡರು.ಕೈಗಾರಿಕಾ ಪ್ರದೇಶ ಹಮಾಲರ ವಿಭಾಗ: ಈರಣ್ಣ ಭೀಮಯ್ಯ ಅವರು 110ಕೆಜಿ ಉಸುಕಿನ(ಮರಳು)ಚೀಲವನ್ನು10 ನಿಮಿಷಗಳಲ್ಲಿ 3,626 ಅಡಿ ಹೊತ್ತು ಪ್ರಥಮ ಬಹುಮಾನ ಅರ್ಧ ತೊಲ ಚಿನ್ನದ ಉಂಗುರ ಪಡೆದುಕೊಂಡರು.ತಿಮ್ಮಪ್ಪಹುಸೇನಪ್ಪ ದೇವನಪಲ್ಲಿ ಅವರು10 ನಿಮಿಷಗಳಲ್ಲಿ 3,400ಅಡಿ ಹೊತ್ತು ದ್ವಿತೀಯ ಬಹುಮಾನ 5ತೊಲ ಬೆಳ್ಳಿ ಕಡಗ ಪಡೆದುಕೊಂಡರು. ರಾಮಪ್ಪ ತಿಮ್ಮಪ್ಪ ಅವರು 3,400 ಅಡಿ ಹೊತ್ತು ತೃತೀಯ ಬಹುಮಾನವಾಗಿ 2ತೊಲ ಬೆಳ್ಳಿ ಕಡಗ ಪಡೆದುಕೊಂಡಿದ್ದಾರೆ.ವೀರೇಶ ಶಂಶಾಲಪ್ಪ ಅವರು10 ನಿಮಿಷಗಳಲ್ಲಿ 2,934ಅಡಿ ಹೊತ್ತು ನಾಲ್ಕನೇ ಬಹುಮಾನ 2ತೊಲ ಬೆಳ್ಳಿ ಕಡಗ ಪಡೆದುಕೊಂಡರು.

ಅಕ್ಕಿಗಿರಣಿ ಹಮಾಲರ ವಿಭಾಗ: ಅಗಸರ ನರಸಪ್ಪತಿಮ್ಮಪ್ಪ ಅವರು 110ಕೆಜಿ ಉಸುಕಿನ (ಮರಳು)ಚೀಲವನ್ನು10 ನಿಮಿಷಗಳಲ್ಲಿ 2,200ಅಡಿ ಹೊತ್ತು ಪ್ರಥಮ ಬಹುಮಾನ ಅರ್ಧ ತೊಲ ಚಿನ್ನದ ಉಂಗುರ ಪಡೆದುಕೊಂಡರು.ಚಂದ್ರಪ್ಪ ನರಸಪ್ಪ ಅವರು 10 ನಿಮಿಷಗಳಲ್ಲಿ 1,900ಅಡಿ ಹೊತ್ತು ದ್ವಿತೀಯ ಬಹುಮಾನ 5ತೊಲ ಬೆಳ್ಳಿ ಕಡಗ ಪಡೆದುಕೊಂಡರು. ಅಗಸರ ತಿಮ್ಮಪ್ಪಮಲ್ಲಯ್ಯ  ಹಾಗೂ  ನರಸಿಂಹಲು ಅಡಿವೆಪ್ಪ ಅವರು 10 ನಿಮಿಷಗಳಲ್ಲಿ 1,400 ಅಡಿ ಹೊತ್ತು ತೃತೀಯ ಬಹುಮಾನ 3ತೊಲ ಬೆಳ್ಳಿ ಕಡಗ  ಸರಿಸಮಾನವಾಗಿ ಪಡೆದುಕೊಂಡಿದ್ದಾರೆ.ಗಂಜ್ ಕಸುಗೂಡಿಸುವ ಮಹಿಳೆಯರ ವಿಭಾಗ: ಎರಡೂ ಕೈಯಲ್ಲಿ 10-10ಕೆಜಿ ಕಲ್ಲು ಹೊರುವ ಸ್ಪರ್ಧೆಯಲ್ಲಿ ನಡೆಯಿತು. ಯಲ್ಲಮ್ಮ ಗೋವಿಂದಪ್ಪ ಅವರು 3,219.3 ಅಡಿ ಹೊತ್ತು ಪ್ರಥಮ ಬಹುಮಾನ ಅರ್ಧ ತೊಲ ಚಿನ್ನದ ಉಂಗುರ ಪಡೆದರು. ಕುರುಬರ ಲಿಂಗಮ್ಮತಿಪ್ಪಣ್ಣ ಅವರು 3,030ಅಡಿ ಹೊತ್ತು ದ್ವಿತೀಯ ಬಹುಮಾನ 5 ತೊಲ ಬೆಳ್ಳಿ ಕಡಗ ಪಡೆದರು.ಆಂಜನಮ್ಮ ಜಂಬಣ್ಣ ಅವರು  2,976ಅಡಿ ಹೊತ್ತು ತೃತೀಯ ಬಹುಮಾನ 3 ತೊಲ ಬೆಳ್ಳಿ ಕಡಗ ಪಡೆದರು.ಬಸಮ್ಮರವಿ ಅವರು  2,096ಅಡಿ ಹೊತ್ತು ನಾಲ್ಕನೇ ಬಹುಮಾನ 5 ತೊಲ ಬೆಳ್ಳಿ ಕಡಗ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry