ಬುಧವಾರ, ಮೇ 12, 2021
18 °C

ಬಜೆಟ್‌ನಲ್ಲಿ ಈ ಆದ್ಯತೆ ಇರಲಿ

-ಉಗ್ರನರಸಿಂಹೇಗೌಡ,ಮೈಸೂರು . Updated:

ಅಕ್ಷರ ಗಾತ್ರ : | |

ವಿದ್ಯುತ್ ಖರೀದಿ ಮಾಡಲೇಬೇಕೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆಹಾರದಷ್ಟೇ ವಿದ್ಯುತ್ ಉತ್ಪಾದನೆಗೆ ಆದ್ಯತೆ ಕೊಡದಿದ್ದರೆ, ಆಹಾರ ಭದ್ರತೆಗೇ ಧಕ್ಕೆ ಬರಲಿದೆ. ಈಗಾಗಲೇ ರಾಜ್ಯ ಸರ್ಕಾರ ಕೋಲಾರ ಮತ್ತು ಶಿಂಷಾ ಬಳಿ ಸ್ಥಾಪಿಸಿರುವ ಸೌರವಿದ್ಯುತ್ ಘಟಕಗಳಂತೆ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಇಂಥಾ ಸೌರವಿದ್ಯುತ್ ಘಟಕಗಳನ್ನು ಸ್ಥಾಪಿಸಬೇಕು. ಮೂರು ವರ್ಷಗಳ ಹಿಂದೆ ಕೋಲಾರದಲ್ಲಿ ಸ್ಥಾಪಿಸಿದ 3 ಮೆಗಾವಾಟ್ ವಿದ್ಯುತ್ ಘಟಕಕ್ಕೆ 15 ಎಕರೆ ಭೂಮಿ ಮತ್ತು 65 ಕೋಟಿ ರೂ. ವೆಚ್ಚವಾಗಿದೆ.

ವರ್ಷದ ಹಿಂದೆ ಶಿಂಷಾ ಬಳಿ ಸ್ಥಾಪಿಸಿದ 5 ಮೆಗಾವಾಟ್ ಸೌರವಿದ್ಯುತ್ ಘಟಕಕ್ಕೆ 25 ಎಕರೆ ಭೂಮಿ 50 ಕೋಟಿ ರೂ. ವೆಚ್ಚವಾಗಿದೆ. ವರ್ಷ ವರ್ಷ ಘಟಕ ಸ್ಥಾಪನೆಯ ವೆಚ್ಚ ಕಡಿಮೆಯಾಗುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಗಮನಿಸಿ, ಪ್ರತಿವರ್ಷ ಎರಡೂವರೆ ಸಾವಿರ ಕೋಟಿ ರೂ.ಗಳಂತೆ ಬಜೆಟ್‌ನಲ್ಲಿ ಮೀಸಲಿಟ್ಟು ಪ್ರತಿ ತಾಲ್ಲೂಕು, ನಂತರ ಹೋಬಳಿಗಳಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿದರೆ ಐದು ವರ್ಷಗಳಲ್ಲಿ ರಾಜ್ಯ 1250 ಮೆಗಾವಾಟ್ ಸೌರವಿದ್ಯುತ್ ಉತ್ಪಾದಿಸಿ ರಾಜ್ಯ ವಿದ್ಯುತ್ ಸ್ವಾವಲಂಬನೆ ಸಾಧಿಸುವಂತೆ ಮಾಡಬಹುದು. ಭಾರಿ ಪ್ರಮಾಣದ ಬಜೆಟ್‌ನಲ್ಲಿ ಎರಡೂವರೆ ಸಾವಿರ ಕೋಟಿ ವೆಚ್ಚ ಅಷ್ಟೇನೂ ಭಾರವಲ್ಲ. ಮೊದಲು ವಿಧಾನಸೌಧ ಮತ್ತು ವಿಕಾಸಸೌಧಗಳ ವಿದ್ಯುತ್ ಮತ್ತು ಕುಡಿಯುವ ನೀರಿನ ಅಗತ್ಯಕ್ಕೆ ಮಳೆ ನೀರು ಸಂಗ್ರಹಣೆ ಮತ್ತು ಸೌರಫಲಕಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಮುಂದಾಗಲಿ. ಅಲ್ಲದೆ ರಾಜ್ಯದ ಪ್ರತಿ ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಕಲ್ಯಾಣ ಮಂಟಪ ಮತ್ತು ಆಸ್ಪತ್ರೆ (ಖಾಸಗೀ - ಸರ್ಕಾರಿ)ಗಳಲ್ಲಿ ಮಳೆ ನೀರು ಸಂಗ್ರಹಣೆ ಮತ್ತು ಸೌರವಿದ್ಯುತ್ ಸ್ವಾವಲಂಬನೆಗಳನ್ನು ಕಡ್ಡಾಯ ಮಾಡಲಿ.

-ಉಗ್ರನರಸಿಂಹೇಗೌಡ, ಮೈಸೂರು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.