ಶುಕ್ರವಾರ, ಜೂನ್ 18, 2021
23 °C

ಬಜೆಟ್‌ನಲ್ಲಿ ಯುವ ನೀತಿ: ಸದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾರ್ಚ್ ತಿಂಗಳು ರಾಜ್ಯ ಸರ್ಕಾರವು ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ `ಯುವ ನೀತಿ~ಯನ್ನು ರೂಪಿಸಲಾಗುವುದು ಮತ್ತು ನಗರದ ಮೂಲಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ಶನಿವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ `ಸರ್ಕಾರಿ ಸವಲತ್ತುಗಳ ಸಂತೆ~ ಉದ್ಘಾಟಿಸಿದ ಅವರು, `ದೇಶದ ಜನಸಂಖ್ಯೆಯಲ್ಲಿ ಯುವಕ-ಯುವತಿಯರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಅವರ ಸರ್ವತೋಮುಖ ಬೆಳವಣಿಗೆಗೆ ಯುವ ನೀತಿಯ ಅಗತ್ಯವಿದೆ. ಯುವ ಸಂಪನ್ಮೂಲವು  ನಾಡಿನ ಅಭಿವೃದ್ಧಿಗೆ ಬಳಕೆಯಾಗಬೇಕು~ ಎಂದು ಹೇಳಿದರು.`ಮುಂದಿನ ಮೂರು ವರ್ಷದಲ್ಲಿ ರಾಜ್ಯದ ಲ್ಲಿರುವ 45 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಸ್ಲಂ ರಹಿತ ರಾಜ್ಯವನ್ನು ರೂಪಿಸಲಾಗುವುದು. ಸಮಾಜದ ಅತೀ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ಇವತ್ತು ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವು ಮಾದರಿ ಯಾಗಿದೆ~ ಎಂದು ಶ್ಲಾಘಿಸಿದರು.`ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋ ಗಿಕವಾಗಿ ಅನುಷ್ಠಾನಗೊಳಿಸಲಾಗಿರುವ ಸೇವಾ ಕಾಯ್ದೆಯನ್ನು ಏಪ್ರಿಲ್ 2 ರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಸಾರ್ವ ಜನಿಕರ ಯಾವುದೇ ಕೆಲಸವನ್ನು ಸಂಪೂರ್ಣ ಗೊಳಿಸಲು ಕೊಟ್ಟ ಅವಧಿಯೊಳಗೆ ಮುಗಿಸ ದಿದ್ದರೆ, ಸಂಬಂಧಪಟ್ಟ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾ ಗುತ್ತದೆ. ಇದರಿಂದ ಸಾರ್ವಜನಿಕರ ಕೆಲಸಗಳು ವೇಗದಲ್ಲಿ ಸಂಪೂರ್ಣವಾಗಲಿವೆ~ ಎಂದರು.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗಳಿಗೆ ಸವಲತ್ತು ವಿತರಣೆ ಮತ್ತು ಹೊಸ ಯೋಜನೆ ಹಾಗೂ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸ ಲಾಯಿತು.

 

ಫ್ಲೆಕ್ಸ್‌ರಹಿತ ನಗರ, ಆಟೊನಗರ, ಸೋಲಾರ್ ಸಿಟಿ ಮತ್ತಿತರ ಯೋಜನೆಗಳನ್ನು ಜಾರಿಗೆ ತರಲಾಯಿತು. ಮುಡಾದ ಆಶ್ರಯ ದಲ್ಲಿ 25,334 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ವಿಜಯ ನಗರ ಮೊದಲ ಹಂತದ ಕ್ರೀಡಾ ಸಂಕೀರ್ಣವನ್ನೂ ಉದ್ಘಾಟಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್, ಲೋಕೋಪ ಯೋಗಿ ಸಚಿವ ಸಿ.ಎಂ. ಉದಾಸಿ, ಪಶುಸಂಗೋಪನೆ ಸಚಿವ ರೇವುನಾಯಕ ಬೆಳಮಗಿ, ಶಾಸಕರಾದ ಸಾ.ರಾ. ಮಹೇಶ್, ಸಿ.ಎಚ್.ವಿಜಯಶಂಕರ್, ಜಿ.ಪಂ. ಅಧ್ಯಕ್ಷೆ ಸುನಿತಾ ವೀರಪ್ಪಗೌಡ, ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ,  ಬಿ.ಪಿ. ಮಂಜುನಾಥ್,  ಜಿ. ಸತ್ಯವತಿ, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮತ್ತಿತರರು ಹಾಜರಿದ್ದರು.ಸಿಎಂ ಕಾರ್ಯಕ್ರಮ:ಬಹಿಷ್ಕರಿಸಿದ ಪತ್ರಕರ್ತರು

 

ಮೈಸೂರು: ಬೆಂಗಳೂರಿನ ಸಿವಿಲ್ ಕೋರ್ಟ್‌ಗೆ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಹಲ್ಲೆ ನಡೆಸಿರುವುದನ್ನು  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಖಂಡಿಸಿ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ಕಾರಿ ಸವಲತ್ತು ಸಂತೆ ಕಾರ್ಯಕ್ರಮವನ್ನು ಬಹಿಷ್ಕರಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಗಾಯಕರು ನಾಡಗೀತೆ, ರೈತಗೀತೆ ಹಾಡಿದರು. ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಸ್ವಾಗತಿಸಿದರು. ಇನ್ನೇನು ಕಾರ್ಯಕ್ರಮ ಉದ್ಘಾಟಿಸ ಬೇಕು ಎನ್ನುವಷ್ಟರಲ್ಲಿ ಕಪ್ಪುಪಟ್ಟಿ ಧರಿಸಿದ ಮಾಧ್ಯಮ ಪ್ರತಿನಿಧಿಗಳು `ಹಲ್ಲೆ ನಡೆಸಿರುವ ವಕೀಲರನ್ನು ಕೂಡಲೇ ಬಂಧಿಸಬೇಕು. ಮಾಧ್ಯಮದವರಿಗೆ ನ್ಯಾಯ ದೊರಕಿಸಿಕೊಡಬೇಕು~ ಎಂದು ಘೋಷಣೆ ಕೂಗುತ್ತ ಡಿ.ವಿ.ಸದಾನಂದಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣ ಮಾತು ಆರಂಭಿಸಿದ ಸದಾನಂದಗೌಡ, `ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಗೂಂಡಾಗಿರಿ ಪ್ರದರ್ಶಿಸಿದ ವಕೀಲರನ್ನು ಬಂಧಿಸುವಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.ಗೂಂಡಾಗಿರಿ ಹತ್ತಿಕ್ಕಲು ಸರ್ಕಾರ ಬದ್ಧವಿದೆ~ ಎಂದು ಸಮಜಾಯಿಷಿ ನೀಡಿದರು. ಆದರೆ, ಮುಖ್ಯಮಂತ್ರಿ ಮಾತಿನಿಂದ ತೃಪ್ತರಾಗದ ಪತ್ರತರ್ಕರು `ಕೂಡಲೇ ತಪ್ಪಿತಸ್ಥರನ್ನು ಬಂಧಿಬೇಕು~ ಎಂದು ಒತ್ತಾಯಿಸಿ, ಕಪ್ಪು ಪಟ್ಟಿ ಪ್ರದರ್ಶಿಸಿ ಸಭಾಂಗಣದಿಂದ ಹೊರನಡೆದರು.ವಿದ್ಯಾರ್ಥಿಗಳ ಬೆಂಬಲ: ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆ ಖಂಡಿಸಿ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಮಹಾರಾಜ ಕಾಲೇಜು ಹಾಗೂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.