ಭಾನುವಾರ, ಮೇ 22, 2022
29 °C

ಬಜೆಟ್ ಅಧಿವೇಶನದಲ್ಲಿ ನಿರ್ಣಯಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ಹೈದರಾಬಾದ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ 371 ನೇ ಕಲಂಗೆ ತಿದ್ದುಪಡಿ ತರಲು ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ನಿರ್ಣಯ ಅಂಗೀಕರಿಸಬೇಕು ಎಂದು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಘಟಕದ ಒತ್ತಾಯಿಸಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಸಜ್ಜನ್, ಅತಿ ಹಿಂದುಳಿದಿರುವ ಹೈದರಾಬಾದ ಕರ್ನಾ ಟಕ ಶೈಕ್ಷಣಿಕ, ಆರ್ಥಿಕ, ಕೈಗಾರಿಕೆ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಲು 371 ನೇ ಕಲಂಗೆ ತಿದ್ದುಪಡಿ ತರುವುದು ಅತ್ಯವಶ್ಯಕವಾ ಗಿದೆ ಎಂದರು.ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ನಿರ್ಣಯ ಮಂಡಿಸಬೇಕು. ಅದಕ್ಕೆ ಅಂಗೀಕಾರವನ್ನೂ ಕೊಡಬೇಕು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಈ ಭಾಗದ ಜನಪ್ರತಿನಿಧಿಗಳು, ಪ್ರಮು ಖರು, ಯುವಕರು, ವಿದ್ಯಾವಂತರು, ಸಾಹಿತಿಗಳು, ಮಠಾಧೀಶರು, ವಕೀಲರು ಸೇರಿದಂತೆ ವಿವಿಧ ಸಂಘ ಟನೆಗಳ ಒಂದಾಗಿ ಕೇಂದ್ರ ಸರ್ಕಾರದ ಇಲಾಖೆಗಳ ಎದುರು ಧರಣಿ ನಡೆಸ ಲಿವೆ ಎಂದು ಎಚ್ಚರಿಸಿದರು.ಈ ಬಗ್ಗೆ ರಾಜ್ಯಸಭೆ ಸದಸ್ಯ ಕೆ.ಬಿ. ಶಾಣಪ್ಪನವರು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದು, ಲೋಕಸಭಾ ಸದಸ್ಯ ಎನ್. ಧರ್ಮಸಿಂಗ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಶೀಘ್ರ ನಿರ್ಣಯ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.ಈಗಾಗಲೇ ನವೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭ ದಲ್ಲಿ ಸಂಸತ್‌ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ವೈಜನಾಥ ಪಾಟೀಲರ ಆರೋಗ್ಯ ಸರಿ ಇಲ್ಲದಿರುವುದು ಹಾಗೂ ಚಳಿಗಾಲದ ಅಧಿವೇಶನದಲ್ಲಿ 371 ನೇ ಕಲಂ ತಿದ್ದುಪಡಿಗೆ ಸರ್ಕಾರ ಕ್ರಮ ಕೈಗೊಳ ್ಳಲಿದೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡ ಲಾಗಿದೆ ಎಂದು ಸ್ಪಷ್ಟಪಡಿಸಿದರು.ಜನಜಾಗೃತಿ ಜಾಥಾ: 371 ನೇ ಕಲಂ ತಿದ್ದುಪಡಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದಿಂದ ಜನ ಜಾಗೃತಿ ಜಾಥಾ ಆರಂಭಿಸಲಾಗುತ್ತಿದೆ. ಈ ಜಾಥಾ ಕೊಪ್ಪಳದಿಂದ ಆರಂಭ ವಾಗಿ 5 ಜಿಲ್ಲೆಗಳ ಹೋಬಳಿಗಳ ಮೂಲಕ ಬೀದರ್ ತಲುಪಲಿದೆ. ಈ ಜಾಥಾದ ಮೂಲಕ ಹೋಬಳಿಗಳು, ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸ ಲಾಗುವುದು ಎಂದು ತಿಳಿಸಿದರು.ಜಾಗೃತಿ ಜಾಥಾ ಏಪ್ರಿಲ್ ತಿಂಗಳಲ್ಲಿ ಯಾದಗಿರಿಗೆ ಆಗಮಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಪ್ರಮುಖರು, ಯುವಕರು, ಮಠಾಧೀಶರು, ಸಾಹಿತಿ ಗಳು, ವಕೀಲರು, ಸಂಘ-ಸಂಸ್ಥೆಗಳ ಒಟ್ಟಾಗಿ ಕಾರ್ಯಕ್ರಮ ಯಶಸ್ವಿ ಮಾಡ ಬೇಕು ಎಂದು ಮನವಿ ಮಾಡಿದರು. ಜಿ.ಪಂ. ಸದಸ್ಯರಾದ ದೇವರಾಜ ನಾಯಕ, ಎಚ್.ಸಿ. ಪಾಟೀಲ, ಡಾ. ಶರಣಭೂಪಾಲರೆಡ್ಡಿ, ರಾಠೋಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.