ಬಜೆಟ್ ಅನುಷ್ಠಾನದಲ್ಲಿ ಕೃಷಿ ಇಲಾಖೆ ವಿಫಲ

7

ಬಜೆಟ್ ಅನುಷ್ಠಾನದಲ್ಲಿ ಕೃಷಿ ಇಲಾಖೆ ವಿಫಲ

Published:
Updated:
ಬಜೆಟ್ ಅನುಷ್ಠಾನದಲ್ಲಿ ಕೃಷಿ ಇಲಾಖೆ ವಿಫಲ

ಮೈಸೂರು: ಕೇಂದ್ರ ಸರ್ಕಾರವು ಕೃಷಿ ಬಜೆಟ್ ಮಂಡನೆ ಮಾಡಬೇಕು ಎಂದು ಒತ್ತಾಯಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ತಾವು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಮಂಡಿಸಿದ್ದ ಕೃಷಿ ಬಜೆಟ್ ಏನಾಗಿದೆ.ಅದನ್ನು ಅನುಷ್ಠಾನಗೊಳಿಸುವಲ್ಲಿ ಕೃಷಿ ಇಲಾಖೆ ವಿಫಲವಾಗಿದ್ದು `ಡಿ~ ದರ್ಜೆ ಹಣೆಪಟ್ಟಿ ಪಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.ಕನ್ನೇಗೌಡನಕೊಪ್ಪಲಿನಲ್ಲಿ ಬಂದಂತಮ್ಮ ಕಾಳಮ್ಮ ಸಮುದಾಯ ಭವನದ ಉದ್ಘಾಟನೆ ಮತ್ತು ಸಾಮೂ ಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, `ರಾಜ್ಯದಲ್ಲಿ ಇವತ್ತು ರೈತರು ಅತ್ಯಂತ ಕಷ್ಟ ಕರ ಸ್ಥಿತಿಯಲ್ಲಿದ್ದಾರೆ. ಆದರೆ ಅವರಿಗಾಗಿ ಮಂಡಿಸ ಲಾಗಿದ್ದ ಕೃಷಿ ಬಜೆಟ್‌ನ ಯೋಜನೆಗಳಲ್ಲಿ ಶೇ. 50 ರಷ್ಟೂ ಅನುಷ್ಠಾನವಾಗಿಲ್ಲ. ಎಲ್ಲ ಇಲಾಖೆಗಳಿಗೂ ಅವುಗಳ ಕೆಲಸ, ಯೋಜನೆಗಳ ಯಶಸ್ವಿ ಅನುಷ್ಠಾನ ಕ್ಕಾಗಿ ದರ್ಜೆ ಕೊಡಲಾಗುತ್ತಿದೆ. ಇಂತಹ ದರ್ಜೆಯಲ್ಲಿ ಕೊನೆ ಸ್ಥಾನದಲ್ಲಿ ರಾಜ್ಯ ಕೃಷಿ ಇಲಾಖೆ ಇದೆ~ ಎಂದರು.`ಒಕ್ಕಲಿಗ ಸಮುದಾಯವು ಎಲ್ಲರಿಗೂ ರಕ್ಷಣೆ ಕೊಡುವ ಸಮಾಜ. ಬೇರೆಯವರನ್ನು ತುಳಿದು ಮೇಲೆ ಬರುವ ಜಾಯಮಾನವೇ ಅಲ್ಲ. ಅತ್ಯಂತ ಕಠಿಣ ಪರಿಶ್ರಮ, ಶ್ರದ್ಧೆಯಿಂದಲೇ ಪ್ರಗತಿ ಸಾಧಿಸುವವರು. ಈ ಸಮುದಾಯ ಭವನದ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ, ಶೈಕ್ಷಣಿಕ ಧನ ಸಹಾಯ ಮಾಡಬೇಕು. ಇಲ್ಲಿಂದ ಬರುವ ಆದಾಯವನ್ನು ಅಂತಹ ಕಾರ್ಯಕ್ಕೆ ವಿನಿಯೋಗಿಸಿ. ಆ ಮೂಲಕ ನಾಡು, ನುಡಿ ಕಟ್ಟುವ ಕೆಲಸವಾಗಬೇಕು~ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, `ಜನನ ಆಕಸ್ಮಿಕ ಮತ್ತು ಮರಣ ನಿಶ್ಚಿತ. ಇವೆರೆಡರ ನಡುವಿನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಆ ಕಾರ್ಯಗಳಿಂದಲೇ ಸಮಾಜ ನಮ್ಮನ್ನು ಸದಾ ಕಾಲ ಸ್ಮರಿಸುವಂತಾ ಗುತ್ತದೆ~ ಎಂದರು.ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಎಸ್. ಶಂಕರಲಿಂಗೇಗೌಡ, ಸಾ.ರಾ.ಮಹೇಶ್, ಸಿ.ಎಚ್. ವಿಜಯಶಂಕರ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮೇಯರ್ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ಉಪ ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಸುನೀತಾವೀರಪ್ಪಗೌಡ, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ವಾಸು, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಎಸಿಪಿ ಪ್ರಕಾಶ ಗೌಡ,    ಟ್ರಸ್ಟ್ ಅಧ್ಯಕ್ಷ ಬಿ. ಬೋರಯ್ಯ  ಇದ್ದರು.

ಮುಖ್ಯಮಂತ್ರಿ ಕಾಲಹರಣ: ಎಚ್‌ಡಿಕೆ

 ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆರು ತಿಂಗಳು ಮಾಡಿರುವುದು ರಾಜ್ಯಭಾರವಲ್ಲ, ಕಾಲಹರಣ. ನಾನೇ ಬಜೆಟ್ ಮಂಡಿಸುತ್ತೇನೆ, ಇನ್ನೂ ಒಂದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಅವರು ಹೇಳಿಕೊಳ್ಳುತ್ತಿರುವುದರ ಅರ್ಥ ಏನು~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.ಭಾನುವಾರ ಕನ್ನೇಗೌಡನಕೊಪ್ಪಲಿನಲ್ಲಿ ನೂತನ ಸಮುದಾಯ ಭವನ ಉದ್ಘಾಟನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.`ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಲವು ಸುದ್ದಿಗಳನ್ನು ನೋಡಿದರೆ ಬಿಜೆಪಿಯ ಒಳಗಿನ ಭಿನ್ನಾಭಿಪ್ರಾಯದ ಅರಿವಾಗುತ್ತದೆ. ಶಾಸಕರ ಸಹಿ ಸಂಗ್ರಹ, ಪುನಃ ಅಧಿಕಾರದ ಸ್ಥಾನಮಾನಗಳಿಗಾಗಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರದ ವರಿಷ್ಠರತ್ತ ಹೋಗುತ್ತಿರುವುದು. ಇದೆಲ್ಲದರ  ನಡುವೆಯೂ ನಾನು ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಸದಾನಂದಗೌಡರು ಹೇಳುತ್ತಿದ್ದಾರೆ. ಇದನ್ನು ಯಾರೂ ನಂಬಲಿಕ್ಕೆ ಸಾಧ್ಯವಿಲ್ಲ~ ಎಂದರು.`ಸರ್ಕಾರದ ಇಲಾಖೆಗಳಲ್ಲಿ ಅಧಿಕಾರಿಗಳು ಮುಖ್ಯಮಂತ್ರಿಗಳ ಸೂಚನೆಗಳನ್ನು ಪಾಲಿಸುತ್ತಿಲ್ಲ. ಮುಖ್ಯಮಂತ್ರಿಯಾಗಲು ಆಸೆ ಪಡಲು ಅದೇ ಪಕ್ಷದ ನಾಯಕರು ದಿನಕ್ಕೊಂದು ಹೇಳಿಕೆ ಜೀವಂತವಾಗಿಟ್ಟಾಗ, ಅಧಿಕಾರಿಗಳೂ ಸರ್ಕಾರದ ಸೂಚನೆ ಪಾಲನೆ ಮಾಡಲು ಗೊಂದಲ ಹುಟ್ಟಿಸುತ್ತವೆ~ ಎಂದು ಹೇಳಿದರು.ಆಪರೇಷನ್ ಕೈ ವಿಫಲ: `ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟು ಸರಿಪಡಿಸಲು ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಕುರಿತು ಹೋರಾಟ ಮಾಡುವ ಗಮನ ಅವರಿಗೆ ಇಲ್ಲ. ನಿನ್ನೆ ನಡೆದ ಅವರ ಪಕ್ಷದ ಸಭೆಯ ವರದಿ ಗಳು ಇದನ್ನು ತೋರಿಸುತ್ತವೆ. ಆಪರೇಷನ್ ಮಾಡುವುದು ಕಾಂಗ್ರೆಸ್ ಇತಿಹಾಸ. ಅವರು ಮುಂದೆ ಮಾಡಲು ಉದ್ದೇಶಿಸಿರುವ ಆಪರೇಷನ್  ವಿಫಲವಾಗಲಿದೆ. ಅದಕ್ಕೆ ಈ ಬಾರಿ ಯಾರೂ ಬಲಿಯಾಗುವುದಿಲ್ಲ~ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry