ಸೋಮವಾರ, ಜೂನ್ 21, 2021
26 °C

ಬಜೆಟ್: ಉದ್ಯಮ ರಂಗ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚುನಾವಣೆ  ಗಮನದಲ್ಲಿಟ್ಟುಕೊಂಡು ಅತ್ಯಂತ ಕೌಶಲ್ಯದಿಂದ  ಬಜೆಟ್ ಮಂಡಿಸಲಾಗಿದ್ದು, ಇದರಿಂದ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಲಾಭವಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಪ್ರಕಾಶ್ ರಾಯ್ಕರ್ ಅಭಿಪ್ರಾಯಪಟ್ಟಿದ್ದಾರೆ.12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ರೂ  50 ಲಕ್ಷ ಕೋಟಿ ಬಂಡವಾಳ ಮೀಸಲಿಟ್ಟಿರುವ ಕ್ರಮವೂ ಸಣ್ಣ ಕೈಗಾರಿಕೆ ವಲಯದ ಪ್ರಗತಿಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಹೀಗೆ ಹಲವು ಪರೋಕ್ಷ ಲಾಭಗಳಿದ್ದರೂ, ಅನೇಕ ನಕಾರಾತ್ಮಕ ಸಂಗತಿಗಳೂ ಬಜೆಟ್‌ನಲ್ಲಿವೆ ಎಂದು ಹೇಳಿದ್ದಾರೆ.ಪ್ರಮುಖವಾಗಿ ಸೇವಾ ತೆರಿಗೆ ಮತ್ತು ಕೇಂದ್ರ ಅಬಕಾರಿ ತೆರಿಗೆಯನ್ನು ಶೆ 2ರಷ್ಟು ಹೆಚ್ಚಿಸಿರುವ ಕ್ರಮವು ಸಣ್ಣ ಕೈಗಾರಿಕೆಗಳ ವೃದ್ಧಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಎಫ್‌ಕೆಸಿಸಿಐ ಸ್ವಾಗತ: ಪ್ರಸಕ್ತ ಅವಧಿಯ ಬಜೆಟ್ ಸಮತೋಲಿತವಾಗಿದ್ದು, ಆರ್ಥಿಕ ಪ್ರಗತಿಗೆ ಆದ್ಯತೆ ನೀಡಲಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷ ಜೆ.ಆರ್ ಬಂಗೇರಾ ಅಭಿಪ್ರಾಯಪಟ್ಟಿದ್ದಾರೆ.ಖಾಸಗಿ-ಸರ್ಕಾರಿ ಪಾಲುದಾರಿಕೆ (ಪಿಪಿಪಿ) ಯೋಜನೆಗಳಿಗೆ ಉತ್ತೇಜನ ನೀಡಿರುವುದಿಂದ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಿರುವು ಉತ್ತಮ ಕ್ರಮ ಎಂದು ಹೇಳಿದ್ದಾರೆ.ಬಿಸಿಐಸಿ ಸ್ವಾಗತ: `ಅತ್ಯಂತ ಮೃದು ಮತ್ತು ಸಮತೋಲಿತ ಬಜೆಟ್~ ಎಂದು ಬೆಂಗಳೂರು ವಾಣಿಜ್ಯೋದ್ಯಮ ಮಹಾಸಂಘ (ಬಿಸಿಐಸಿ) ಬಣ್ಣಿಸಿದೆ. ಬಾಹ್ಯ ವಾಣಿಜ್ಯ ಸಾಲದ (ಇಸಿಬಿ) ಮೂಲದ ಬಂಡವಾಳ ಸಂಗ್ರಹಿಸಿ, ಮೂಲಸೌಕರ್ಯ,  ವಿದ್ಯುತ್, ವಿಮಾನಯಾನ, ಗೃಹ ನಿರ್ಮಾಣ ಕ್ಷೇತ್ರಗಳಿಗೆ ತೊಡಗಿಸುವ ಕ್ರಮವು  ಸಮರ್ಪಕವಾಗಿದೆ ಎಂದು `ಬಿಸಿಐಸಿ~ ಅಧ್ಯಕ್ಷ ವಿನೋದ್ ನೋವಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.